ಬನ್ನಿರಿ ಬನ್ನಿರಿ
ಚೆಲುವಿನ ಚಿಣ್ಣರೇ
ನಿಮ್ಮಯ ಶಾಲೆಯ
ಕಡೆಗೀಗ
ಬೇಸಿಗೆ ರಜೆಯ
ಬೇಸರ ಕಳೆದು
ಶಾಲೆಯ ಕಡೆಗೆ ನಡೆ ಈಗ..||
ಹೊಸ ಸಮವಸ್ತ್ರ ಪಠ್ಯಪುಸ್ತಕ
ನಿಮಗಾಗಿ ಕಾದಿಹವು
ನಿಮ್ಮಯ ಪಾದಕೆ ಮೆತ್ತನೆ ಶ್ಯೂ ಸಾಕ್ಸ್ ಕೆಲವೇ ದಿನದಿ ಬರಲಿಹವು...|೧|
ಎಂದಿನ ಹಾಗೆ ಪಾಠಕೆ ಮೊದಲು
ಕೆನೆಕೆನೆ ಹಾಲು ನಿಮಗಾಗಿ
ಪಾಠದ ಬಳಿಕ ಹಸಿದ ಹೊಟ್ಟೆಗೆ
ಬಿಸಿಬಿಸಿ ಊಟ ರುಚಿಯಾಗಿ...|೨|
ಪಾಠದ ಜತೆಗೆ ಆಟದ ಮಜವು
ನಿಮ್ಮಯ ಜತೆಗೆ ನಾವಿಲ್ಲಿ
ಸ್ಪಷ್ಟ ಓದು ಶುದ್ಧ ಬರಹ
ಸರಳ ಗಣಿತವೇ ಇನ್ನಿಲ್ಲಿ...|೩|
ರೇಡಿಯೋ ಆಲಿಸಿ
ಟಿವಿಯ ವೀಕ್ಷಿಸಿ
ಕಂಪ್ಯೂಟರ್ ನ ಕಲಿಯೋಣ
ನಕಾಶೆ ಬಿಡಿಸಿ
ಪೋಷಾಕು ತೊಡಿಸಿ
ಪ್ರತಿಭಾ ಕಾರಂಜಿಯಾಗೋಣ..|೪|
ಎಲ್ಲವ ಕಲಿತು ಎಲ್ಲರ ಬೆರೆತು
ಸಾಕ್ಷರ ಭಾರತ ಕಟ್ಟೋಣ
ವಿವಿಧತೆಯಲ್ಲಿ ಐಕ್ಯತೆ ಮೆರೆದು
ಹಿರಿಮೆಯ ಗುರಿಯ ಮುಟ್ಟೋಣ..|೫|
--- ಸಚಿನ್ ಕುಮಾರ ಬ. ಹಿರೇಮಠ
ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ
ತಾ. ಜೇವರ್ಗಿ, ಜಿ. ಕಲಬುರಗಿ