ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

ಸಭಾ ನಡೆವಳಿಗಳು

2019-20 ಶೈಕ್ಷಣಿಕ ವರ್ಷ:
1. ಜಿಲ್ಲಾ ಮಟ್ಟದ ಸಭೆ-1(03/06/2019)

ದಿ. 03/06/2019 ರಂದು ಕಲಬುರಗಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಷನ್ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಸಿ.ಆರ್.ಪಿ, ಬಿ.ಆರ್.ಪಿ, ಬಿ.ಐ.ಆರ್.ಟಿ,ಶಿಕ್ಷಣ ಸಂಯೋಜಕರಿಗೆ, ಅಕ್ಷರ ದಾಸೋಹ ಅಧಿಕಾರಿಗಳಿಗೆ, ಬಿ.ಇ.ಓ ಹಾಗೂ ಬಿ.ಆರ್.ಸಿ.ಸಿ ಅವರಿಗೆ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಹಾಜರಿದ್ದ ಅಧಿಕಾರಿ ವರ್ಗ:

1. ಡಾ.ಪಿ.ರಾಜ, ಸಿ.ಇ.ಓ, ಜಿ.ಪಂ ಕಲಬುರಗಿ
2. ಶ್ರೀ ಶಾಂತಗೌಡ ಪಾಟೀಲ, ಮಾನ್ಯ ಉಪನಿರ್ದೇಶಕರು(ಆಡಳಿತ) ಸಾ.ಶಿ.ಇ ಕಲಬುರಗಿ
3. ಶ್ರೀ ಶಶಿಕಾಂತ ಮರ್ತುಳೆ, ಮಾನ್ಯ ಉಪನಿರ್ದೇಶಕರು(ಅಭಿವೃದ್ಧಿ) ಡಯಟ್ ಕಮಲಾಪೂರ
4. ಶ್ರೀ ಟಿ.ನಾರಾಯಣಗೌಡ, ನಿರ್ದೇಶಕರು, ಅಪರ ಆಯುಕ್ತರ ಕಚೇರಿ, ಸಾ.ಶಿ.ಇ ಕಲಬುರಗಿ
5. ಶ್ರೀ ಸಕ್ರೆಪ್ಪ ಗೌಡ, ಮಾನ್ಯ ಉಪನಿರ್ದೇಶಕರು(ಅಭಿವೃದ್ಧಿ) ಡಯಟ್ ಬೀದರ
6. ಶ್ರೀ ಬಿ.ರುದ್ರೇಶ, ಜಿಲ್ಲಾ ಮುಖ್ಯಸ್ಥರು ಅಜೀಂ ಪ್ರೇಮ್ ಜಿ ಫೌಂಡೇಷನ್ ಕಲಬುರಗಿ ಹಾಗೂ ಗುರುಚೇತನ ಆಯ್ಕೆ ಸಮಿತಿ ಸದಸ್ಯರು
7. ಎಲ್ಲ 8 ತಾಲೂಕಿನ ಬಿ.ಇ.ಓ ಹಾಗೂ ಬಿ.ಆರ್.ಸಿ.ಸಿ



-:ಸಭೆಯಲ್ಲಿ ನೀಡಲಾದ ಮಾಹಿತಿ ಹಾಗೂ ಚರ್ಚಿಸಿದ ಅಂಶಗಳು:-

1. ದಿ.20/05/2019 ರಿಂದ ದಿ. 31/05/2019 ರವರೆಗೆ ವಿಶೇಷ ದಾಖಲಾತಿ ಆಂದೋಲನ ನಡೆಸುವಂತೆ ಹಾಗೂ ದಿ. 01/6/2019 ರಿಂದ ದಿ. 30/06/2019 ರ ವರೆಗೆ ಸಾಮನ್ಯ ದಾಖಲಾತಿ ಆಂದೋಲನ ನಡೆಸುವಂತೆ ಸೂಚಿಸಲಾಗಿತ್ತು. ಆದರೆ ಇದುವರೆಗೂ ಯಾವ ಶಾಲೆಗಳಲ್ಲಿಯೂ ಈ ಎರಡು ಅಂದೋಲನಗಳು ನಡೆದಿರುವ ಬಗ್ಗೆ ಯಾವ ಮಾಧ್ಯಮಗಳಲ್ಲಿ ವರದಿಯಾಗಿರುವುದಿಲ್ಲ. ಕಾರಣ ಎಲ್ಲ ಮುಖ್ಯಗುರುಗಳು ಹಾಗೂ ಶಿಕ್ಷಕರು ವಿಶೇಷ ಕಾಳಜಿ ವಹಿಸಿ ಗ್ರಾಮಗಳಲ್ಲಿ, ವಾರ್ಡ್ ಗಳಲ್ಲಿ ವ್ಯಾಪಕ ಪ್ರಚಾರ ಮಾಡುವುದು. ವಿಶೇಷ ದಾಖಲಾತಿ ಅಂದೋಲನದಲ್ಲಿ ದಾಖಲಾದ ಮಕ್ಕಳ ಸಂಖ್ಯೆಯನ್ನು ನೀಡುವುದು ಮತ್ತು ಈ ಅಂದೋಲನಗಳನ್ನು ನಡೆಸಿರುವ ಬಗ್ಗೆ ದೃಢೀಕರಣ ಬ್ಲಾಕ್ ಹಂತಕ್ಕೆ ನೀಡುವುದು.

2. ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಪಾಲಕ/ಪೋಷಕರಲ್ಲಿ ಒಲವು ಮೂಡಿಸಲು ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದು. ಸರ್ಕಾರಿ ಶಾಲೆಗಳಲ್ಲಿನ ಪ್ರೋತ್ಸಾಹಕಗಳು, ಸವಲತ್ತುಗಳು ಹಾಗೂ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವುದು. ತಾಪಮಾನ ಅಧಿಕವಿರುವ ಕಾರಣ ಜಿಲ್ಲೆಯಲ್ಲಿ ಶಾಲೆಗಳ ಪ್ರಾರಂಭೋತ್ಸವವನ್ನು ದಿ. 14/06/2019 ಕ್ಕೆ ಮುಂದೂಡಲಾಗಿದ್ದು, ತಾಪಮಾನ ಕಡಿಮೆಯಾದಲ್ಲಿ ಶಾಲಾ ಪ್ರಾರಂಭೋತ್ಸವವನ್ನು ದಿ.10/06/2019 ಕ್ಕೆ ಹಿಂದೂಡಲಾಗುವುದು.ಶಾಲಾ ಪ್ರಾರಂಭೋತ್ಸವವನ್ನು ವಿಭಿನ್ನವಾಗಿ ಅಂದರೆ ಅಕ್ಷರ ಬಂಡಿ, ಬೀದಿ ನಾಟಕ,ಆರತಿ ಮಾಡುವುದು, ಸಸಿ ನೆಡುವುದು ಮುಂತಾದ ರೀತಿಯಿಂದ ಆಚರಿಸಿ ಸಿಹಿ ಊಟ ನೀಡುವುದು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಮಾಡುವುದು. ಇದರ ಬಗ್ಗೆಯೂ ಬ್ಲಾಕ್ ಹಂತಕ್ಕೆ ವರದಿ ಮಾಡುವುದು.

3. ಶಾಲಾ ಭೌತಿಕ ಸೌಲಭ್ಯಗಳು ಲಭ್ಯವಿರುವಂತೆ ಶಾಲಾ ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸುವುದು. ಜಿಲ್ಲೆಯಲ್ಲಿ ಶೇ.80 ರಷ್ಟು ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸದೇ ಶಾಲಾ ಸೌಂದರ್ಯೀಕರಣವನ್ನು ಮಾಡದೇ ಇರುವುದು ವಿಷಾದನೀಯ. ಕೂಡಲೇ ಎಲ್ಲ ಶಾಲೆಗಳಿಗೆ ಸುಣ್ಣ ಬಣ್ಣ ಮಾಡಿಸುವುದು. ಶಾಲಾ ಸೌಂದರ್ಯೀಕರಣ ಮಾಡದ ಶಾಲೆಗಳ ಮಾಹಿತಿಯನ್ನು ಸಿ.ಆರ್.ಪಿ ಗಳು ವರದಿ ಮಾಡುವುದು.

4. ಯೂ – ಡೈಸ್ ಪ್ಲಸ್ ಮಾಹಿತಿಯನ್ನು ಕಡ್ಡಾಯವಾಗಿ ಎಸ್.ಎ.ಟಿ.ಎಸ್ ನಲ್ಲಿ ಅಪ್ ಡೇಟ್ ಮಾಡಿ ದೃಢೀಕರಣ ಪತ್ರವನ್ನು ಅಪ್ ಲೋಡ್ ಮಾಡುವುದು. ತಪ್ಪಿದ್ದಲ್ಲಿ 2019-20 ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ಅನುದಾನ ಪಡೆಯುವಲ್ಲಿ ತೊಂದರೆಯುಂಟಾಗಬಹುದು. ಅಲ್ಲದೇ ಕ್ರಿಯಾ ಯೋಜನೆಗಳಿಗೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದಂತಾಗುವ ಸಂಭವವಿರುತ್ತದೆ.

5. ಹಲವಾರು ಶಾಲೆಗಳಲ್ಲಿ ಅಕ್ಷರ ದಾಸೋಹ ಕೇಂದ್ರಗಳ ಸ್ಥಿತಿಗತಿ ತುಂಬಾ ಅಸಹನೀಯವಾಗಿರುತ್ತದೆ. ಆಹಾರಧಾನ್ಯಗಳನ್ನು ಸ್ಟೀಲ್/ಜರ್ಮನ್ ಸ್ಟೀಲ್ ಪಾತ್ರೆಗಳಲ್ಲಿ ಸಂಗ್ರಹಿಸುವುದು. ಕೋಣೆಯ ಸ್ವಚ್ಛತೆಗೆ ಹಾಗೂ ಅಡುಗೆ ತಯಾರಕರ ಸ್ವಚ್ಛತೆಗೆ ಗಮನ ನೀಡುವುದು. ಆಹಾರ ಬೇಡಿಕೆ ಹಾಗೂ ಬಳಕೆ ಮಾಹಿತಿಯನ್ನು ಪ್ರತಿ ತಿಂಗಳು ಬ್ಲಾಕ್ ಹಂತದ ಅಕ್ಷರ ದಾಸೋಹ ಅಧಿಕಾರಿಗಳಿಗೆ ನೀಡುವುದು. ಪ್ರತಿ ದಿನ ಫಲಾನುಭಾವಿಗಳ ಮಾಹಿತಿಯನ್ನು ನಿಗದಿತ ಫಾರ್ಮ್ಯಾಟ್ ನಲ್ಲಿ  ಎಸ್.ಎಂ.ಎಸ್ ಕಳುಹಿಸುವುದು.

6. ಶಾಲೆಗಳಿಗೆ 3 ವಿಧದಲ್ಲಿ ಅನುದಾನ ನೀಡಲಾಗಿರುತ್ತದೆ.
ಮೊದಲನೆಯ ಅನುದಾನ
 ಸಮಗ್ರ ಶಿಕ್ಷಣ ಅಭಿಯಾನದಲ್ಲಿ
ಜಮೆ ಮಾಡಲಾದ ಶಾಲಾ ಅನುದಾನ

ಎರಡನೆಯದು ಕುಡಿಯುವ ನೀರು ಹಾಗೂ ಶೌಚಾಲಯಕ್ಕೆ ಬಿಇಓ ಕಾರ್ಯಾಲಯದಿಂದ ನೀಡಲಾದ ಅನುದಾನ.

ಮೂರನೆಯದು ಶಿಕ್ಷಕರ ಸಂಖ್ಯೆಗನುಸಾರವಾಗಿ ಬಿಇಓ ಕಾರ್ಯಾಲಯದಿಂದ ಜಮೆ ಮಾಡಲಾದ ಶೈಕ್ಷಣಿಕ ಅನುದಾನ

  ಈ ಮೂರು ಅನುದಾನಗಳನ್ನು ಜಾಣತನದಿಂದ ಶಾಲಾಭಿವೃದ್ಧಿಗೆ ಮುಖ್ಯಗುರುಗಳು ಬಳಸುವುದು.

7. ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ಶಾಲಾ ಪ್ರಾರಂಭೋತ್ಸವದ ದಿನ ಜನಪ್ರತಿನಿಧಿಗಳ, ಎಸ್.ಡಿ.ಎಂ.ಸಿ ಹಾಗೂ ಪೋಷಕರ ಸಮ್ಮುಖದಲ್ಲಿ ವಿತರಿಸುವುದು. ಹೀಗೆ ವಿತರಿಸುವಾಗ ನಿರಂತರ ಹಾಜರಾತಿಯಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುವುದು.ಈ ಬಗ್ಗೆಯೂ ಬ್ಲಾಕ್ ಹಂತಕ್ಕೆ ವರದಿ ನೀಡುವುದು.

8. ಶಾಲಾ ಪ್ರಾರಂಭೋತ್ಸವಕ್ಕೂ ಮುನ್ನ 2018 -19 ನೆಯ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಶಾಲಾವಾರು ಮಕ್ಕಳ ಪಟ್ಟಿ ನೀಡಲಾಗಿದೆ. ಅದರನ್ವಯ ಸಂಬಂಧಿಸಿದ ಮುಖ್ಯಗುರುಗಳು ಆ ಮಕ್ಕಳನ್ನು ಮುಖ್ಯವಾಹಿನಿಗೆ ಸೇರಿಸುವುದು. ಇಲ್ಲವಾದಲ್ಲಿ ನಿರ್ದಿಷ್ಟ ಹೇಳಿಕೆಯನ್ನು ಬ್ಲಾಕ್ ಹಂತಕ್ಕೆ ನೀಡುವುದು. ಕೊನೆಯ ತರಗತಿ ಮಕ್ಕಳು ಮುಂದಿನ ತರಗತಿಗೆ ದಾಖಲಾಗುವಂತೆ ಪೋಷಕರಿಗೆ ಸೂಚಿಸಿವುದು.ವಿದ್ಯಾರ್ಥಿನಿಯರಿದ್ದಲ್ಲಿ ಸಮೀಪದ ಕರ್ನಾಟಕ ಕಸ್ತೂರಿ ಬಾಯಿ ಬಾಲಿಕಾ ವಸತಿನಿಲಯ(KKGV) ಹಾಗೂ ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯ(KGBV)ಗೆ ಸೇರಿಸುವುದು.

9. 2018-19 ನೆಯ ಸಾಲಿನಲ್ಲಿ ಎಸ್.ಎಸ್.ಪಿ(ಸ್ಟೇಟ್ ಸ್ಕಾಲರ್ಷಿಪ್ ಪೋರ್ಟಲ್) ನಲ್ಲಿ ಅರ್ಜಿ ಸಲ್ಲಿಸಿದ ಕೆಲ ವಿದ್ಯಾರ್ಥಿಗಳ(ಆಧಾರ್ ಸಂಖ್ಯೆ ಇರುವ) ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಸೀಡ್ ಆಗಿರುವುದಿಲ್ಲ. ಈ ಬಗ್ಗೆ ಸ್ವತಃ ಮುಖ್ಯಗುರುಗಳು ಬ್ಯಾಂಕ್ ಗೆ ಭೇಟಿ ನೀಡಿ ಸೀಡ್ ಮಾಡಿಸುವುದು. ಖಾತೆ ಇರದ ಮಕ್ಕಳನ್ನು ಸಮೀಪದ ಬ್ಯಾಂಕ್ ಗೆ ಅಥವಾ ಪೋಸ್ಟ್ ಆಫೀಸಿನಲ್ಲಿ ಖಾತೆ ತೆರೆಯುವಂತೆ ಸೂಚಿಸುವುದು. ಈ ಬಗ್ಗೆ ಪ್ರಗತಿ ವರದಿಯನ್ನು ಬ್ಲಾಕ್ ಹಂತಕ್ಕೆ ನೀಡುವುದು.

10. ತಿಂಗಳಿನ ಪ್ರತಿ ಮೂರನೆಯ ಶನಿವಾರವನ್ನು ಬ್ಯಾಗ್ ರಹಿತ ದಿನ ವನ್ನಾಗಿ ಆಚರಿಸುವುದು. ಈ ಸಂದರ್ಭದಲ್ಲಿ ಆ ಧಿನ ಶಿಕ್ಷಕರು ಕೈಗೊಳ್ಳುವ ಚಟುವಟಿಕೆಗಳನ್ನು ಶಾಲಾ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಬ್ಲಾಕ್ ಹಂತಕ್ಕೆ ನೀಡುವುದು.

11. ಈ ಸಲ ಸರಬರಾಜಾದ ಪಠ್ಯ ಪುಸ್ತಕಗಳು ETB(Energized Text Book) ಗಳಾಗಿದ್ದು, ಅದರಲ್ಲಿ ವಿವಿಧ ಕಲಿಕಾಂಶಗಳ ಮುಂದೆ ನೀಡಲಾದ QR Codeನ್ನು ಅಂಡ್ರಾಯ್ಡ್ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಇದಕ್ಕಾಗಿ Google PlayStore ನಿಂದ Deeksha ಎಂಬ ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.

*)12. ಪ್ರತಿ ಪ್ರೌಢ ಶಾಲೆಗಳು ಅಟಲ್ ಟಿಂಕರಿಂಗ್ ಲ್ಯಾಬ್ ಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಶಾಲೆಯಲ್ಲಿ ಸ್ಥಾಪಿಸಿಕೊಳ್ಳಬಹುದಾಗಿದೆ.

13. ಈ ಬಾರಿ ಕ್ಲಸ್ಟರ್ ಸಮಾಲೋಚನಾ ಸಭೆಗಳನ್ನು ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಾಗಾರ ಅಡಿಯಲ್ಲಿ ‘ಕಲಿಯೋಣ ಬನ್ನಿ’ ಎಂಬ ಹೆಸರಿನೊಂದಿಗೆ  ಹೋಬಳಿ ಮಟ್ಟದಲ್ಲಿ 5 ಹಂತದಲ್ಲಿ ನಡೆಯಲಿವೆ.

14. ಜೇವರ್ಗಿ ತಾಲೂಕಿಗೆ ಸಂಬಂಧಿಸಿದಂತೆ 1 KPS(Karnataka Public School) ಪ್ರಾರಂಭವಾಗಿದ್ದು 3 ಆಂಗ್ಲ ಮಾಧ್ಯಮ ವಿಭಾಗವಿರುವ ಶಾಲೆಗಳು ಪ್ರಾರಂಭವಾಗಿವೆ. ಸದರಿ ಶಾಲೆಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ಆಂಗ್ಲ ಮಾಧ್ಯಮದ ವಿಭಾಗದಲ್ಲಿ 30 ವಿದ್ಯಾರ್ಥಿಗಳಿರುವಂತೆ ಕ್ರಮವಹಿಸುವುದು. ಅಲ್ಲಿ ಆಯಾ ಹಾಗೂ NTC ಶಿಕ್ಷಕರನ್ನು ನೇಮಿಸಿಕೊಳ್ಳುವುದು.

15. 2018-19 ನೆಯ ಸಾಲಿನ CSAS ಫಲಿತಾಂಶ ಶಾಲಾ ಲಾಗಿನ್ ದಲ್ಲಿ ಲಭ್ಯವಿದ್ದು ಅದರ ವಿವರವನ್ನು ಮುದ್ರಿಸಿಕೊಂಡು ಶಾಲಾವಾರು,ವಿದ್ಯಾರ್ಥಿವಾರು, ತರಗತಿವಾರು, ವಿಷಯವಾರು,ಲಿಂಗವಾರು ವಿಶ್ಲೇಷಣಾ ವರದಿ ಸಿದ್ಧಪಡಿಸಿಕೊಂಡು 2019-20ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜೂನ್ 20 ರೊಳಗಾಗಿ ಬ್ಲಾಕ್ ಹಂತಕ್ಕೆ ನೀಡುವುದು.

ಮೇಲಿನ ಅಂಶಗಳೊಂದಿಗೆ ನಿಗದಿಯಂತೆ ಉಳಿದ ರೀತಿಯ ಎಲ್ಲ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಪರಿಣಾಮಕಾರಿ ಕಲಿಕೆಯ ಮೂಲಕ ಗುಣಾತ್ಮಕ ಶಿಕ್ಷಕಕ್ಕೆ ಒಕ್ಕೂರಲಿನಿಂದ ಒತ್ತು ನೀಡುವುದು.

No comments:

Post a Comment