ಈ ಫಾರ್ಮ್ಯಾಟ್ ನಲ್ಲಿ ಮಾಹಿತಿ ನೀಡುವುದು.
- ಮುಖಪುಟ
- ಸಾರ್ವಜನಿಕ ಶಿಕ್ಷಣ ಇಲಾಖೆ
- ನಂಮ ಶಾಲೆ ಬ್ಲಾಗ್
- ಶಿಕ್ಷಕ ಕಲ್ಯಾಣ ನಿಧಿ ವಿವರ
- ಶಿಕ್ಷಣವಾರ್ತೆ
- ಇಲಾಖೆಯಲ್ಲಿನ ವಿವಿಧ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು
- ಶಿಕ್ಷಣ ಕಿರಣ(SATS)
- ಇಜೇರಿ OOSC ಮಾಹಿತಿ 2017-18
- ಶಿಕ್ಷಕರ ಸೇವಾ ವಿವರ
- ಸಂಪರ್ಕ ಮಾಹಿತಿ
- ಇಜೇರಿ ವಲಯದ ಶಾಲೆಗಳ ವಿವರ
- ಸುತ್ತೋಲೆಗಳು & ಹೊಸ ಮಾಹಿತಿಗಳು
- ಹಣಕಾಸು ವಿವರ
- ಶಾಲೆಗಳು & ಮುಖ್ಯೋಪಾಧ್ಯಾಯರುಗಳು
- ವಿಶೇಷ ಅಗತ್ಯತೆಯುಳ್ಳ ಮಕ್ಕಳ ಮಾಹಿತಿ
- ಸಭಾ ನಡೆವಳಿಗಳು
- ಫೋಟೊ ಗ್ಯಾಲರಿ
- ಬ್ಲಾಗ್ ರಚನೆ : ಸಚಿನ್ಕುಮಾರ ಹಿರೇಮಠ
- ಇದುವರೆಗಿನ ಸಿ.ಆರ್.ಪಿಗಳ ವಿವರ
ಪ್ರಮುಖ ಸಂದೇಶ
Tuesday, 25 October 2016
Monday, 17 October 2016
ಇಜೇರಿ ವಲಯದ ಶಾಲೆಗಳಲ್ಲಿ 'ಸ್ವಚ್ಛ ಭಾರತ ಅಭಿಯಾನ' ಮತ್ತು 'ವಿಶ್ವ ಕೈ ತೊಳೆಯುವ ದಿನಾಚರಣೆ'
![]() |
ಸ.ಹಿ.ಪ್ರಾ.ಶಾಲೆ ಕೊಡಚಿ |
Sunday, 16 October 2016
ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ 16/09/2016
ದಿನಾಂಕ 16/09/2016 ರಂದು ಸ.ಹಿ.ಪ್ರಾ.ಶಾಲೆ ಯಾಳವಾರದಲ್ಲಿ ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಿತು. ಈ ಒಂದು ಸುಂದರ ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಮಹಾಂತಗೌಡ ಎನ್. ಮಾಲಿ ಪಾಟೀಲ್ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಮರೆಪ್ಪ ಬರ್ಮಾ ಅವರು ಆಯೋಜಿಸಿದ್ದರು. ಹಿಂದಿನ ದಿನವೇ ಶಾಲಾವರಣ ಹಾಗೂ ಶಾಲಾ ಕೋಣೆಗಳನ್ನು ಸಿಂಗರಿಸಿ ಎಲ್ಲಾ ವ್ಯವಸ್ಥೆಗಳನ್ನು ಏರ್ಪಾಡು ಮಾಡಿದ್ದರು.
ಅಲ್ಲದೇ ಶಾಲೆಯ ಶಿಕ್ಷಕರಾದ ಶ್ರೀ ಶರಣಬಸವೇಶ್ವರ, ಶ್ರೀ ಕರೆಪ್ಪ, ಶ್ರೀ ಸಂಗಮೇಶ,ಶ್ರೀ ಇಮಾಮ್ ಸಾಬ ಮುಂತಾದವರನ್ನೊಳಗೊಂಡಂತೆ ಎಲ್ಲ ಶಿಕ್ಷಕ ವೃಂದ ಪೂರ್ವಭಾವಿಯಾಗಿ ಎಲ್ಲ ಸಿದ್ಧತೆಗಳನ್ನು ಮಾಡಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು.
ಅಂದುಕೊಂಡಂತೆ 16/09/2016 ರ ಬೆಳಿಗ್ಗೆ 11.30 ಗಂಟೆಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟನಾ ಸಮಾರಂಭ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಮಹಾಂತಗೌಡ ಮಾಲಿ ಪಾಟೀಲ್ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಂದೋಲಾ ವಲಯದ ಜಿಲ್ಲಾ ಪಂಚಾಯತ್ ಸದಸ್ಯರ ಪರವಾಗಿ ಶ್ರೀ ಮಹಾದೇವಪ್ಪ ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಬಿ.ಪಾಟೀಲ್, ಕಾರ್ಯದರ್ಶಿಯಾದ ಶ್ರೀ ಗುಡುಲಾಲ್ ಶೇಖ, ಕ.ರಾ.ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿಯಾದ ಶ್ರೀ ಮರೆಪ್ಪ ಮೂಲಿಮನಿ ಹಾಗೂ ಇತರೆ ಸಂಘಗಳ ಪದಾಧಿಕಾರಿಗಳು ಹಾಗೂ ಇಜೇರಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್ ಕುಮಾರ ಹಿರೇಮಠ ಇವರು ಶ್ರೀ ನಾರಾಯಣ ಗುರು ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ತದನಂತರ ಎಲ್ಲ ಗಣ್ಯರಿಗೆ ಸನ್ಮಾನಿಸಿ ಇಜೇರಿ ಸ.ಸಂ.ವ್ಯಕ್ತಿಗಳು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗುಡುಲಾಲ್ ಶೇಖ್, ಶ್ರೀ ಮರೆಪ್ಪ ಮೂಲಿಮನಿ ಮುಂತಾದವರು ಮಾತನಾಡಿದರು. ಶ್ರೀ ಕರೆಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶರಣಬಸವೇಶ್ವರ ಸ್ವಾಗತಿಸಿದರು. ಶ್ರೀ ಅಫ್ಸರ್ ಮಿಯಾ ವಂದಿಸಿದರು.
ಕಾರ್ಯಕ್ರಮದ ಕೆಲವು ಫೋಟೊಗಳು :
Subscribe to:
Posts (Atom)