ದಿನಾಂಕ 16/09/2016 ರಂದು ಸ.ಹಿ.ಪ್ರಾ.ಶಾಲೆ ಯಾಳವಾರದಲ್ಲಿ ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಿತು. ಈ ಒಂದು ಸುಂದರ ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಮಹಾಂತಗೌಡ ಎನ್. ಮಾಲಿ ಪಾಟೀಲ್ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಮರೆಪ್ಪ ಬರ್ಮಾ ಅವರು ಆಯೋಜಿಸಿದ್ದರು. ಹಿಂದಿನ ದಿನವೇ ಶಾಲಾವರಣ ಹಾಗೂ ಶಾಲಾ ಕೋಣೆಗಳನ್ನು ಸಿಂಗರಿಸಿ ಎಲ್ಲಾ ವ್ಯವಸ್ಥೆಗಳನ್ನು ಏರ್ಪಾಡು ಮಾಡಿದ್ದರು.
ಅಲ್ಲದೇ ಶಾಲೆಯ ಶಿಕ್ಷಕರಾದ ಶ್ರೀ ಶರಣಬಸವೇಶ್ವರ, ಶ್ರೀ ಕರೆಪ್ಪ, ಶ್ರೀ ಸಂಗಮೇಶ,ಶ್ರೀ ಇಮಾಮ್ ಸಾಬ ಮುಂತಾದವರನ್ನೊಳಗೊಂಡಂತೆ ಎಲ್ಲ ಶಿಕ್ಷಕ ವೃಂದ ಪೂರ್ವಭಾವಿಯಾಗಿ ಎಲ್ಲ ಸಿದ್ಧತೆಗಳನ್ನು ಮಾಡಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು.
ಅಂದುಕೊಂಡಂತೆ 16/09/2016 ರ ಬೆಳಿಗ್ಗೆ 11.30 ಗಂಟೆಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟನಾ ಸಮಾರಂಭ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಮಹಾಂತಗೌಡ ಮಾಲಿ ಪಾಟೀಲ್ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಂದೋಲಾ ವಲಯದ ಜಿಲ್ಲಾ ಪಂಚಾಯತ್ ಸದಸ್ಯರ ಪರವಾಗಿ ಶ್ರೀ ಮಹಾದೇವಪ್ಪ ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಬಿ.ಪಾಟೀಲ್, ಕಾರ್ಯದರ್ಶಿಯಾದ ಶ್ರೀ ಗುಡುಲಾಲ್ ಶೇಖ, ಕ.ರಾ.ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿಯಾದ ಶ್ರೀ ಮರೆಪ್ಪ ಮೂಲಿಮನಿ ಹಾಗೂ ಇತರೆ ಸಂಘಗಳ ಪದಾಧಿಕಾರಿಗಳು ಹಾಗೂ ಇಜೇರಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್ ಕುಮಾರ ಹಿರೇಮಠ ಇವರು ಶ್ರೀ ನಾರಾಯಣ ಗುರು ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ತದನಂತರ ಎಲ್ಲ ಗಣ್ಯರಿಗೆ ಸನ್ಮಾನಿಸಿ ಇಜೇರಿ ಸ.ಸಂ.ವ್ಯಕ್ತಿಗಳು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗುಡುಲಾಲ್ ಶೇಖ್, ಶ್ರೀ ಮರೆಪ್ಪ ಮೂಲಿಮನಿ ಮುಂತಾದವರು ಮಾತನಾಡಿದರು. ಶ್ರೀ ಕರೆಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶರಣಬಸವೇಶ್ವರ ಸ್ವಾಗತಿಸಿದರು. ಶ್ರೀ ಅಫ್ಸರ್ ಮಿಯಾ ವಂದಿಸಿದರು.
ಕಾರ್ಯಕ್ರಮದ ಕೆಲವು ಫೋಟೊಗಳು :
No comments:
Post a Comment