ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Tuesday, 1 August 2017

ಕ್ಷೇತ್ರ ಶಿಕ್ಷಣಾಧಿಕಾರಿಗಳ ಭಾವನಾತ್ಮಕ ಬಿಳ್ಕೊಡುಗೆ


"ಕೂಡುವುದು ಸಹಜ
ಅಗಲಿಕೆ ಅನಿವಾರ್ಯ"
 ದಿ.೩೧/೦೭/೨೦೧೭ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೇವರ್ಗಿಯಲ್ಲಿ ನಮ್ಮ ನೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಜಿ.ಮಜ್ಹರ್ ಹುಸೇನ್ ಅವರ ಬಿಳ್ಕೊಡುವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಡಾ. ನಿಂಗರಾಜ ಮೂಲಿಮನಿ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು,ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು. ಆಲೂರು ಸಿ.ಆರ್.ಪಿ ಯಾದ ಶ್ರೀ ದಾವಲ್ ಸಾಬ ನಿರೂಪಿಸಿದರು. ಸಿ.ಆರ್.ಪಿ ಗಳಾದ ಶ್ರೀ ಮಲ್ಲನಗೌಡ, ಶ್ರೀ ಪ್ರಮೋದ್, ಶ್ರೀ ಸಚಿನ್ ಕುಮಾರ,ಶ್ರೀ ಓಬಳೇಶ್ ಹಾಗೂ ಬಿ.ಆರ್.ಪಿ ಯಾದ ಶ್ರೀ ಮನೋಹರ ಅನಿಸಿಕೆ ವ್ಯಕ್ತಪಡಿಸಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶರಣಪ್ಪ ಹೊಸಮನಿ, ಐಇಆರ್ಟಿ ಶ್ರೀ ಗುರುಶಾಂತಪ್ಪ ಚಿಂಚೋಳಿ ಹಾಗೂ ಪ್ರೌಢ ಶಾಲಾ ಮುಖ್ಯಗುರುಗಳಾದ ಹಣಮಂತ ಕುಳಗೇರಿ ಅವರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಗ್ಗೆ ಅವರ ಕಾರ್ಯ ವೈಖರಿಯ ಬಗ್ಗೆ ಮೆಚ್ಚಿನ ಮ ಅದರ ಮಾತುಗಳನ್ನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಪೇಕ್ಷೆಯ ಮೇರೆಗೆ ನರಿಬೋಳ ತಾಂಡಾ ಮುಖ್ಯ ಗುರು ಗಳಾದ ಶ್ರೀ ಗುರು ಲಿಂಗಪ್ಪ  ಬುಕ್ಕಾ ಅವರು ವಚನ ಸುಧೆ ಹಾಡಿ ರಂಜಿಸಿದರು. 

ಬಳಿಕ ಬಿ ಆರ್ ಸಿ ಕಾರ್ಯಾಲಯದ ವತಿಯಿಂದ,ಕ.ರಾ.ಸ.ನೌ.ಸಂಘ ,ಕ.ರಾ.ಪ್ರಾ.ಶಾ.ಶಿ.ಸಂಘ ಹಾಗೂ ಕ.ರಾ.ಪ್ರೌ.ಶಾ.ಶಿ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ತರುವಾಯ ತಮ್ಮ ಸೇವೆಯ ಬಗ್ಗೆ ಹಾಗೂ ಶಿಕ್ಷಕರೊಂದಿಗಿನ ಒಡನಾಟದ ಬಗ್ಗೆ ಕ್ಷೇತ್ರ ಶಿಕ್ಷಣಾದಿಕಾರಿಗಳು ಅಭಿಪ್ರಾಯ ಹಂಚಿಕೊಂಡರು. ವೃತ್ತಿಪರತೆಯನ್ನು ಮೆಚ್ಚಿ ಸ್ವಾಭಿಮಾನದಿಂದ ಸೇವೆ ಸಲ್ಲಿಸಲು ಸೂಚಿಸಿದರು. ಅವರ ಮಾತುಗಳಿಂದ ಅಲ್ಲಿ ನೆರೆದವರೆಲ್ಲ ಭಾವುಕರಾದರು. 

 ಒಂದು ವಿಷಣ್ಣ ಮನಸ್ಥಿತಿಯಿಂದ ಮೆಚ್ಚಿನ ಅಧಿಕಾರಿಯನ್ನು ಬಿಳ್ಕೊಡಲಾಯಿತು.

No comments:

Post a Comment