ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Sunday, 2 September 2018

ಓದು ಕರ್ನಾಟಕ - ಒಂದು ವಿನೂತನ ಕಾರ್ಯಕ್ರಮ


2017-18 ನೆಯ ಸಾಲಿನಿಂದ 9 ಜಿಲ್ಲೆಗಳಲ್ಲಿ ಓದು ಕರ್ನಾಟಕ  ಎಂಬ ವಿನೂತನ ಕಾರ್ಯಕ್ರಮವೊಂದು ಆರಂಭವಾಗಿದೆ. ಈ ಬಾರಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿರುವ ಈ ಓದು ಕರ್ನಾಟಕ  4 ಮತ್ತು 5 ನೆಯ ತರಗತಿಯ ವಿದ್ಯಾರ್ಥಿಗಳಲ್ಲಿ ನಿರರ್ಗಳವಾದ ಹಾಗೂ ಅರ್ಥಪೂರ್ಣವಾದ ಓದು ಹಾಗೂ ಮೂರಂಕಿಗಳಲ್ಲಿ ಎಲ್ಲ ಮೂಲ ಕ್ರಿಯೆಗಳನ್ನು ಸರಾಗವಾಗಿ ಮಾಡಬಲ್ಲ ಉದ್ದಿಶ್ಶ ಹೊಂದಿರುವ  ಈ ಕಾರ್ಯಕ್ರಮವು ಸಾಕಷ್ಟು ರೀತಿಯಲ್ಲಿ ಬಾಲಸ್ನೇಹಿಯಾಗಿದೆ ಎನ್ನಬಹುದು. ಮುಖ್ಯವಾಗಿ ಭಾಷೆ ಹಾಗೂ ಗಣಿತವನ್ನು ಬಲಪಡಿಸಲು ಸರಳ ಕನ್ನಡ ಹಾಗೂ ಸರಳ ಗಣಿತ  ಎಂಬ ಶೀರ್ಷಿಕೆಯಡಿಯಲ್ಲಿ ರಚನೆಯಾಗಿದೆ. ಗರಿಷ್ಠ ಕಲಿಕೆಗಾಗಿ ಸಂಯೋಜಿತ ಚಟುವಟಿಕೆಗಳು(Combined Activities for Maximized Learning) ಎಂಬ ವಿಶಿಷ್ಟವಾದ  ಕಲಿಕಾ ವಿಧಾನದ ಮೇಲೆ ಈ ಕಾರ್ಯಕ್ರಮ ಅವಲಂಬಿತವಾಗಿದೆ.

ಕಲಿಕಾ ಮಟ್ಟ ನಿರ್ಧಾರ :
60 ದಿನಗಳ ಅಭ್ಯಾಸ ತರಗತಿಗಳ ಮೂಲಕ ಉದ್ದಿಶ್ಶವನ್ನು ಸಾಧಿಸುವ ನಿಟ್ಟಿನಲ್ಲಿ  ಸರಳವಾದ ಪರೀಕ್ಷಣಾ ನಮೂನೆಗಳ ಮೂಲಕ ವಿದ್ಯಾರ್ಥಿಗಳನ್ನು ಅವರ ಕಲಿಕಾ ಮಟ್ಟಕ್ಕನುಗುಣವಾಗಿ ವಿಂಗಡಿಸಿಕೊಂಡು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಭಾಷೆಯಲ್ಲಿ ಏನೂ ಗೊತ್ತಿಲ್ಲದ, ಅಕ್ಷರ, ಪದ, ಪ್ಯಾರಾ ಹಾಗೂ ಕಥೆ ಮಟ್ಟದಲ್ಲಿರುವ ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಲಾಗುತ್ತದೆ. ನಂತರ  ಇವುಗಳಲ್ಲಿ ಏನೂ ಗೊತ್ತಿಲ್ಲದ, ಅಕ್ಷರ ಹಾಗೂ ಪದ ಮಟ್ಟದಲ್ಲಿರುವ ವಿದ್ಯಾರ್ಥಿಗಳನ್ನು ಸೇರಿಸಿ ಪ್ರಾರಂಭಿಕ ಗುಂಫು ಎಂದೂ, ಪ್ಯಾರಾ ಹಾಗೂ ಕಥೆಯ ಮಟ್ಟದಲ್ಲಿರುವ ವಿದ್ಯಾರ್ಥಿಗಳನ್ನು ಸೇರಿಸಿ ಮುಂದುವರೆದ ಗುಂಪು ಎಂದು ವಿಂಗಡಿಸಲಾಗತ್ತದೆ.

  ಅದೇ ರೀತಿ ಗಣಿತದಲ್ಲಿ ಏನೂ ಗೊತ್ತಿಲ್ಲದ, 1 ಅಂಕಿ ಮಾತ್ರ ಗೊತ್ತಿರುವ, 2 ಅಂಕಿ ಸಮಖ್ಯೆಗಳು ಗೊತ್ತಿರುವ ಹಾಗೂ 3 ಅಂಕಿ ಸಂಖ್ಯೆಗಳು  ಗೊತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿಕೊಳ್ಳಲಾಗುತ್ತದೆ. ಅವರ ಮೂಲಕ್ರಿಯೆಗಳ ಜ್ಞಾನವನ್ನೂ ಸಹ ಪರೀಕ್ಷಸಿಸಲಾಗುತ್ತದೆ. ಇಲ್ಲಿ ಏನೂ ಗೊತ್ತಿಲ್ಲದ ಹಾಗೂ 1 ಅಂಕಿ ಮಾತ್ರ ಗೊತ್ತಿರುವ ವಿದ್ಯಾರ್ಥಿಗಳನ್ನು ಸೇರಿಸಿ ಪ್ರಾರಂಭಿಕ ಗುಂಪು ಎಂತಲೂ ಹಾಗೂ 2 ಅಂಕಿ ಸಂಖ್ಯೆ ಗೊತ್ತಿರುವ ಹಾಗೂ 3 ಅಂಕಿ ಸಂಖ್ಯೆ ಗೊತ್ತಿರುವ ವಿದ್ಯಾರ್ಥಿಗಳನ್ನು ಸೇರಿಸಿ ಮುಂದುವರೆದ ಗುಂಪು ಎಂದು ವಿಂಗಡಿಸಲಾಗುತ್ತದೆ. ತದನಂತರ ದೊಡ್ಡ ಗುಂಪಿನಲ್ಲಿ, ಚಿಕ್ಕ ಗುಂಪಿನಲ್ಲಿ ಹಾಗೂ ವ್ಯಕ್ತಿಗತ ಚಟುವಟಿಕೆಗಳ ಆಯೋಜನೆ ಮಾಡಲಾಗುತ್ತದೆ.

ಪ್ರಾರಂಭಿಕ ಮೌಲ್ಯಮಾಪನ, ಮಧ್ಯಂತರ ಮೌಲ್ಯಮಾಪನ ಹಾಗೂ ಅಂತಿಮ ಮೌಲ್ಯಮಾಪನ ಮಾಡುವುದರ ಮೂಲಕ ವಿದ್ಯಾರ್ಥಿಗಳ ಮಟ್ಟವಾರು ಚಲನೆಯನ್ನು ಅವರಲ್ಲಾದ ಕಲಿಕಾ ಪ್ರಗತಿಯನ್ನು ಅಳೆಯಲಾಗುತ್ತದೆ.

ಅಕ್ಷರ ರಟ್ಟು, ಚಿತ್ರಪಟ, ಚಾರ್ಟ್, ಕಥಾಗುಚ್ಛಗಳು, ಅಭ್ಯಾಸ ಪುಸ್ತಕಗಳು ಹಾಗೂ ಅನೇಕ ಮಿಂಚುಪಟ್ಟಿಗಳ ಸಹಾಯದಿಂದ ಭಾಷೆಯಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ಅದೇ ರೀತಿ ಗಣಿತದಲ್ಲಿ ಸಂಖ್ಯಾ ತಾಲಿಕೆ, ಚಾರ್ಟ್, ಸ್ಟ್ರಾಗಳು, ಆಟಿಕೆ ನೋಟುಗಳು ಹಾಗೂ ಅಭ್ಯಾಸ ಪುಸ್ತಕಗಳನ್ನು ಬಳಸಿಕೊಂಡು ಅಭ್ಯಾಸ ಮಾಡಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಅತೀವ ಸಂತಸದಾಯಕ ಕಲಿಕೆಯನ್ನು ಉಂಟು ಮಾಡುವ ಈ CaMAL ವಿಧಾನವು ವಿಶಿಷ್ಠವಾಗಿದೆ ಎನ್ನಬಹುದು. 

No comments:

Post a Comment