


ದಿ. 07/11/2016 ರಿಂದ ದಿ. 09/11/2016 ರವರೆಗೆ ಕಲಬುರಗಿಯ ಸರ್ಕಾರಿ ಪ್ರಾತ್ಯಕ್ಷಿಕೆ ಪ್ರೌಢ ಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪುರ ಹಾಗೂ ಅಜೀಂ ಪ್ರೇಂ ಜಿ ಫೌಂಡೇಶನ್ ಇವರ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗಾಗಿ ತರಬೇತಿ ಸಾಹಿತ್ಯ ರಚನಾ ಕಾರ್ಯಾಗಾರ ನಡೆಯಿತು. ಸಿ.ಜಿ.ಹಳ್ಳದ್ ಉಪನ್ಯಾಸಕರು, ಸರ್ಕಾರಿ ಪ್ರಾತ್ಯಕ್ಷಿಕೆ ಪ್ರೌಢಶಾಲೆ ಇವರು ನೋಡಲ್ ಅಧಿಕಾರಿಗಳಾಗಿದ್ದರು. 1ನೆಯ ತರಗತಿಯಿಂದ 3 ನೆಯ ತರಗತಿಗಾಗಿ 'ನಲಿಕಲಿ', 4ನೆಯ ತರಗತಿಯಿಂದ 5ನೆಯ ತರಗತಿ ಹಾಗೂ 6ನೆಯ ತರಗತಿಯಿಂದ 8 ನೆಯ ತರಗತಿಯ ಎಲ್ಲಾ ವಿಷಯನ್ನೊಳಗೊಂಡ ಸಂಕಲಿತ ತರಬೇತಿ ಸಾಹಿತ್ಯ ರಚನೆಗಾಗಿ ಜಿಲ್ಲೆಯ 8 ಬ್ಲಾಕ್ ಗಳಿಂದ ಸುಮಾರು 60 ಜನ ಸಂಪನ್ಮೂಲ ವ್ಯಕ್ತಿಗಳು ಸೇರಿದ್ದರು. ಕನ್ನಡ,ಇಂಗ್ಲಿಷ್ ವಿಜ್ಞಾನ ಮತ್ತು ಪರಿಸರ ಅಧ್ಯಯನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಗಳ ಬೋಧನೆಯಲ್ಲಿ ನಂಮ ಶಿಕ್ಷಕರು ಅನುಭವಿಸುತ್ತಿರುವ ಕಷ್ಟಕರ ವಿಧಾನಗಳನ್ನು ಸರಳೀಕರಿಸಿ ತರಗತಿಯಲ್ಲೆ ಕೈಗೊಳ್ಳಬಹುದಾದ ರಚನಾ ವಾದದ ಮೇಲೆ ಆಧಾರಿತ ಚಟುವಟಿಕೆಗಳನ್ನು ಸೇರಿಸಿ ತರಬೇತಿ ಸಾಹಿತ್ಯ ರಚನೆ ಮಾಡಲಾಯಿತು. ನವೆಂಬರ್ 2016 ಮಾಹೆಯಲ್ಲಿ ಈ ತರಬೇತಿ ಸಾಹಿತ್ಯ ಪೂರ್ಣಗೊಂಡು ಡಿಸೆಂಬರ್ ಮೊಲ ವಾರದಲ್ಲಿ ನಂಮ ಶಿಕ್ಷಕರಿಗೆ ತಲುಪಲಿದೆ. 5 ದಿನಗಳ ತರಬೇತಿಯಲ್ಲಿ ಸಮಗ್ರವಾಗಿ ಎಲ್ಲ ವಿಷಯಗಳ ಬೋಧನಾ ವಿಧಾನ, ಚಟುವಟಿಕೆಗಳು ಹಾಗೂ ಸಂತಸದಾಯಕ ಕಲಿಕಾ ವಿಧಾನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಸುಮಾರು 1200 ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ.
No comments:
Post a Comment