ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Wednesday, 30 November 2016

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮಾಹಿತಿಯ ನಮೂನೆಗಳು

ಈ ಆದೇಶ ಓದಿ ಹಾಗೂ ಈ ನಮೂನೆಗಳ ಅನ್ವಯ ಶಾಲಾವಾರು(ತಾಲ್ಲೂಕಿನ ಹೆಸರು ಎಂದಿದ್ದಲ್ಲಿ ಶಾಲೆಯ ಹೆಸರು ಎಂದು ನಮೂದಿಸಿ) ನಾಳೆ 01/12/2016 ರಂದು ಮಾಹಿತಿ ತುರ್ತಾಗಿ ನೀಡುವುದು.

Wednesday, 16 November 2016

‌‍‍ಮಕ್ಕಳ ದಿನ ೧೪.೧೧.೨೦೧೬

ಸರಕಾರಿ ‌‌ಪ್ರೌಢ ಶಾಲೆ ‌ಇಜೇರಿಯಲ್ಲಿ ‌ಮಕ್ಕಳ ‌ದಿನವನ್ನು ‌ ‌ಸಂಭ್ರಮದಿಂದ ‌ಆಚರಿಸಲಾಯಿತು.‌ ಶಾಲೆಯ ಮುಖ್ಯಗುರುಗಳಾದ ಶ್ರೀ ಶಿವಲಿಂಗಪ್ಪ ದುಮ್ಮದ್ರಿ, ಸಹ ಶಿಕ್ಷಕರುಗಳಾದ.ಶ್ರೀ ವೈಜನಾಥ,ಶ್ರೀ ಭೀಮಣ್ಣ ,ಶ್ರೀಮತಿ ಚಂದ್ರಕಲಾ ಹಾಗೂ ಶ್ರೀಮತಿ ತೇಜಶ್ವರಿ ಮುಂತಾದವರು ಹಾಜರಿದ್ದರು. ಇಜೇರಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಸಚಿನ್ ಕುಮಾರ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಿಕ್ಷಕರೂ ಸಹ ಮಕ್ಕಳ ದಿನದ ಮಹತ್ವವನ್ನು ತಿಳಿಸಿದರು.
  ಇದೇ ರೀತಿ ಇಜೇರಿ ವಲಯದ ಶಾಲೆಗಳಲ್ಲಿಯೂ ಸಹ ಮಕ್ಕಳ ದಿನ ಆಚರಿಸಲಾಯಿತು.

Saturday, 12 November 2016

ಟಿಪ್ಪು ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆಗಳು...

ಇಜೇರಿ ವಲಯದ ವಿವಿಧ ಶಾಲೆಗಳಲ್ಲಿ ಟಿಪ್ಪು ಜಯಂತಿ ಹಾಗೂ ರಾಷ್ಟ್ರೀಯ ಶಿಕ್ಷಣ ದಿನ ಆಚರಿಸಲಾಯಿತು..

ಬಟರ್ ಫ್ಲೈಸ್... ಇದು ಮಕ್ಕಳ ಲೋಕ...

ಅದು ನವದೆಹಲಿಯ ಏರ್ ಪೋರ್ಟಿನ ಎದುರಿನ ಕೊಳಕಾದ ರಸ್ತೆ. ಅಲ್ಲಿ ಮೂರ್ನಾಕ್ಲು ಜನ ಯುವಕರು ಕೆಳಗಿಳಿದು ಸುತ್ತೆಲ್ಲ ವೀಕ್ಷಿಸಿದರು. ಚಿಂದಿ ಆಯುವ ಆ ಮಕ್ಕಳ ದೃಷ್ಟಿಯು ಆ ಮೂರ್ನಾಲ್ಕು ಯುವಕರತ್ತ ಹೋಯಿತು. ಅಲ್ಲಿ ಸರಿಸುಮಾರು 12-18 ಮಕ್ಕಳಿರುವುದನ್ನು ಗಮನಿಸಿದ ಆ ಯುವಕರ ಗುಂಪು ಮತ್ತೇ ಆ ವಾಹನದೊಳಗೆ ಹೋಗಿ ಬಿಡಾರ ಹೂಡಲು ಬೇಕಾದ ಸಾಮಗ್ರಿಗಳನ್ನೆಲ್ಲ ಹೊರತೆಗೆದು ರಸ್ತೆಯ ಪಕ್ಕದಲ್ಲಿ ಒಂದು ಬಿಡಾರ ಹೂಡಿಯೇ ಬಿಟ್ಟರು. ಆ ಸುಂದರವಾದ ಬಿಡಾರ ನೋಡುತ್ತಲೇ ಅಲ್ಲಿದ್ದ ಚಿಂದಿ ಆಯುವ ಬೀದಿ ಮಕ್ಕಳು ಸಹಜವಾಗಿಯೇ ಬಿಡಾರದತ್ತ ಬಂದರು.ಮಕ್ಕಳನ್ನು ಕಂಡ ಆ ಯುವಕರು ಪ್ರೀತಿಯಿಂದ ಅವರನ್ನು ಒಳಗೆ ಬರುವಂತೆ ವಿನಂತಿಸಿದರು. ಮಕ್ಕಳು ತುಸು ಹೊತ್ತು ತಮ್ಮ ಕೆಲಸ ಕಾರ್ಯಗಳನ್ನು ಮರೆತು ಬಿಡಾರದೊಳಗೆ ನಡೆದರು. ಆಗ ಅಲ್ಲಿ ನಡೆದಿದ್ದು ಮಾತ್ರ ವಿಸ್ಮಯ.ಉತ್ಸಾಹಿ ಯುವಕ ಯುವತಿಯರಿಂದ ಸ್ಯಯಂ ಇಚ್ಛಾಶಕ್ತಿಯಿಂದ ಕೇವಲ ಬೀದಿಯಲ್ಲಿ ಅಲೆಯುವ ಮಕ್ಕಳ, ಹೊರಗಡೆ ದುಡಿಯುತ್ತಿರುವ ಮಕ್ಕಳು ಹಾಗೂ ಅನಾಥ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಆರಂಭವಾದ ಒಂದು ಸರ್ಕಾರೇತರ ಸಂಸ್ಥೆ.ಅಸಲಿಗೆ ಅಲ್ಲಿ ಬಂದಿಳದ ವಾಹನ ಒಂದು ಶಾಲಾ ವಾಹನ. ಆ ಶಾಲಾ ವಾಹನದೊಳಗಿದ್ದ ಮೂರ್ನಾಲ್ಕು ಜನ ಯುವಕರು ಬರೀ ಯುವಕರಲ್ಲ. ಅವರು ನುರಿತ ಶಿಕ್ಷಕರು, ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕಾಗಿದ್ದ ಮೆಂಟರ್ ಗಳು. ಅವರು ಹೂಡಿದ್ದು ಬರೀ ಬಿಡಾರವಲ್ಲ. ಅದೊಂದು ಶಾಲಾ ತರಗತಿ. ಆ ಶಾಲಾ ವಾಹನವೇ ಒಂದು ಸಂಚಾರಿ ಶಾಲೆ. ಆ ಸಂಚಾರಿ ಶಾಲೆಯ ಹೆಸರು 'ಬಟರ್ ಫ್ಲಾಯಿಸ್'. ಅಂದರೆ ಚಿಟ್ಟೆಗಳು ಅಂತ. ಬಟರ್ ಫ್ಲಾಯಿಸ್ ಸಂಸ್ಥೆ ಯ ನಿರ್ದೇಶಕರಾದ ರೀಟಾ ಪಾನೀಕರ್ ಅವರು ಹೇಳುವಂತೆ "Butterflies are one of the nature's most beautiful creatures. So is child. Butterfly flits from flower to flower for their sustanance.Our children move constantly for their livelihood. Buterflies have very short lives. Street children have brief childhods.". ಅಂದರೆ ಬೀದಿ ಮಕ್ಕಳು ಥೇಟ್ ಚಿಟ್ಟೆಗಳ ಥರ.ಇಲ್ಲಿ ನಿರ್ದಿಷ್ಟವಾದ ಶಾಲಾ ಕಟ್ಟಡವಾಗಲೀ, ಕಾರ್ಯಾಲಯವಾಗಲೀ ಇಲ್ಲ. ಈ ಶಾಲಾ ವಾಹನ ನಗರಗಳಲ್ಲಿ ದುಡಿಯುತ್ತಿರುವ ಹಾಗೂ ಅನಾಥ ಮಕ್ಕಳನ್ನು ಹುಡುಕಿಕೊಂಡು ಸಂಚರಿತೊಡಗುತ್ತದೆ. ಎಲ್ಲಿ ಅಂತಹ ಮಕ್ಕಳು ಕಾಣಸಿಗುತ್ತಾರೋ ಅಂತವರನ್ನು ಮನವೊಲಿಸಿ ತಮ್ಮ ಶಾಲಾ ವಾಹನಕ್ಕೆ ತುಂಬಿಸಿಕೊಳ್ಳುತ್ತದೆ. ಅಲ್ಲಿನ ಮೆಂಟ್ ಗಳು ಮೊದಲು 6ರಿಂದ 14 ವಯಸ್ಸಿನ ಮಕ್ಕಳನ್ನು ವಿಭಾಗಿಸಿ ಅವರವರ ವಯೋಗುಣಕ್ಕೆ ತಕ್ಕಂತೆ ಮೊದಲೇ ಸಿದ್ಧ ಪಡಿಸಿದ ಪಾಠಯೋಜನೆಯ ಮೂಲಕ ಪಾಠ ಬೋಧನೆ ಮಾಡುತ್ತಾರೆ. ಹೀಗೆ ಈ ಪ್ರಕ್ರಿಯೆ ಸುಮಾರು ತಿಂಗಳುಗಳ ಕಾಲ ನಡೆಯುತ್ತದೆ. ಮುಂದೆ ಆಯಾ ಸಾಮರ್ಥ್ಯಗಳನ್ನು ಮಕ್ಕಳು ಗಳಿಸಿಕೊಂಡ ಮೇಲೆ ಔಪಚಾರಿಕ ಶಿಕ್ಷಣ ಸಂಸ್ಥೆಗಳಿಗೆ ಅಥವಾ ಸರ್ಕಾರಿ ಶಾಲೆಗಳಿಗೆ ಅಂತಹ ಮಕ್ಕಳನ್ನು ಸೇರಿಸಲಾಗುತ್ತದೆ.ಸುಮಾರು 23 ವರ್ಷಗಳೀಂದ ಈ ಸಂಸ್ಥೆ ಹಲವಾರು ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು,ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಶಿಕ್ಷಣ ಪ್ರೇಮಿಗಳ ಬೆಂಬಲದಿಂದ ತನ್ನ ಈ ಅದಮ್ಯವಾದ ಕಾಯಕವನ್ನು ಮಾಡುತ್ತ ಬಂದಿದೆ.ಎಲ್ಲಾ ಸೌಲಭ್ಯವಿದ್ದು ನಮ್ಮ ಶಾಲೆಗಳು ಹಾಗೂ ನಮ್ಮ ಶಿಕ್ಷಕರು ಚಿಟ್ಟೆಗಳಿಂದ ಕಲಿಯುವುದು

ತರಬೇತಿ ಸಾಹಿತ್ಯ ರಚನಾ ಕಾರ್ಯಾಗಾರ - ಕಲಬುರಗಿ








ದಿ. 07/11/2016 ರಿಂದ ದಿ. 09/11/2016 ರವರೆಗೆ ಕಲಬುರಗಿಯ ಸರ್ಕಾರಿ ಪ್ರಾತ್ಯಕ್ಷಿಕೆ ಪ್ರೌಢ ಶಾಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪುರ ಹಾಗೂ ಅಜೀಂ ಪ್ರೇಂ ಜಿ ಫೌಂಡೇಶನ್ ಇವರ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗಾಗಿ ತರಬೇತಿ ಸಾಹಿತ್ಯ ರಚನಾ ಕಾರ್ಯಾಗಾರ ನಡೆಯಿತು. ಸಿ.ಜಿ.ಹಳ್ಳದ್ ಉಪನ್ಯಾಸಕರು, ಸರ್ಕಾರಿ ಪ್ರಾತ್ಯಕ್ಷಿಕೆ ಪ್ರೌಢಶಾಲೆ ಇವರು ನೋಡಲ್ ಅಧಿಕಾರಿಗಳಾಗಿದ್ದರು. 1ನೆಯ ತರಗತಿಯಿಂದ 3 ನೆಯ ತರಗತಿಗಾಗಿ 'ನಲಿಕಲಿ', 4ನೆಯ ತರಗತಿಯಿಂದ 5ನೆಯ ತರಗತಿ ಹಾಗೂ 6ನೆಯ ತರಗತಿಯಿಂದ 8 ನೆಯ ತರಗತಿಯ ಎಲ್ಲಾ ವಿಷಯನ್ನೊಳಗೊಂಡ ಸಂಕಲಿತ ತರಬೇತಿ ಸಾಹಿತ್ಯ ರಚನೆಗಾಗಿ ಜಿಲ್ಲೆಯ 8 ಬ್ಲಾಕ್ ಗಳಿಂದ ಸುಮಾರು 60 ಜನ ಸಂಪನ್ಮೂಲ ವ್ಯಕ್ತಿಗಳು ಸೇರಿದ್ದರು. ಕನ್ನಡ,ಇಂಗ್ಲಿಷ್ ವಿಜ್ಞಾನ ಮತ್ತು ಪರಿಸರ ಅಧ್ಯಯನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯಗಳ ಬೋಧನೆಯಲ್ಲಿ ನಂಮ ಶಿಕ್ಷಕರು ಅನುಭವಿಸುತ್ತಿರುವ ಕಷ್ಟಕರ ವಿಧಾನಗಳನ್ನು ಸರಳೀಕರಿಸಿ ತರಗತಿಯಲ್ಲೆ ಕೈಗೊಳ್ಳಬಹುದಾದ ರಚನಾ ವಾದದ ಮೇಲೆ ಆಧಾರಿತ ಚಟುವಟಿಕೆಗಳನ್ನು ಸೇರಿಸಿ ತರಬೇತಿ ಸಾಹಿತ್ಯ ರಚನೆ ಮಾಡಲಾಯಿತು. ನವೆಂಬರ್ 2016 ಮಾಹೆಯಲ್ಲಿ ಈ ತರಬೇತಿ ಸಾಹಿತ್ಯ ಪೂರ್ಣಗೊಂಡು ಡಿಸೆಂಬರ್ ಮೊಲ ವಾರದಲ್ಲಿ ನಂಮ ಶಿಕ್ಷಕರಿಗೆ ತಲುಪಲಿದೆ. 5 ದಿನಗಳ ತರಬೇತಿಯಲ್ಲಿ ಸಮಗ್ರವಾಗಿ ಎಲ್ಲ ವಿಷಯಗಳ ಬೋಧನಾ ವಿಧಾನ, ಚಟುವಟಿಕೆಗಳು ಹಾಗೂ ಸಂತಸದಾಯಕ ಕಲಿಕಾ ವಿಧಾನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಸುಮಾರು 1200 ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ.

Monday, 7 November 2016

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಲೇಖನ ...


ಪಡೆಯೋಣ ತರಬೇತಿ ; ಉಳಿಸೋಣ ಸಂಸ್ಕೃತಿ...

ಡಿಸೆಂಬರ್ 2015 ರ ಶಿಕ್ಷಣ ವಾರ್ತೆಯಲ್ಲಿ ಪ್ರಕಟಗೊಂಡ ನನ್ನ ಲೇಖನ..

ಏನಿದು ಸ್ಮಾರ್ಟ್ ಕ್ಲಾಸ್...?

ವಿಜಯವಾಣಿಯಲ್ಲಿ ಪ್ರಕಟಗೊಂಡ ಲೇಖನ :


ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ತುರ್ತಾಗಿ ನೀಡಬೇಕಾದ ಮಾಹಿತಿಯ ನಮೂನೆ


ಈ ನಮೂನೆಗಳಲ್ಲಿ 2016-17ನೆಯ ಸಾಲಿನ
ರೂ.ಮೌ1
ರೂ.ಮೌ2
ಸಂ.ಮೌ1
ಮಾಹಿತಿಯನ್ನು ಕ್ರೋಢೀಕರಿಸಿ ಎರಡು ದಿನಗಳೊಳಗೆ ಬಿ ಇ ಓ ಅವರಿಗೆ ಸಲ್ಲಿಸುವುದು..

Tuesday, 25 October 2016

ವಿದ್ಯಾರ್ಥಿಗಳ ಶಾಲಾವಾರು ಆಧಾರ್ ಮಾಹಿತಿ 2016-17

ಈ ಫಾರ್ಮ್ಯಾಟ್ ನಲ್ಲಿ ಮಾಹಿತಿ ನೀಡುವುದು.

Monday, 17 October 2016

ಇಜೇರಿ ವಲಯದ ಶಾಲೆಗಳಲ್ಲಿ 'ಸ್ವಚ್ಛ ಭಾರತ ಅಭಿಯಾನ' ಮತ್ತು 'ವಿಶ್ವ ಕೈ ತೊಳೆಯುವ ದಿನಾಚರಣೆ'

ಸ.ಕಿ.ಪ್ರಾ.ಶಾಲೆ ಚಿಗರಳ್ಳಿ ಕ್ಯಾಂಪ್
ಸ.ಹಿ.ಪ್ರಾ.ಶಾಲೆ ಕೊಡಚಿ
ಸ.ಉ.ಕಿ.ಪ್ರಾ.ಶಾಲೆ ಸೀಗರಥಹಳ್ಳಿ
ಸ.ಹಿ.ಪ್ರಾ.ಶಾಲೆ ಗೂಗಿಹಾಳ

ಸ.ಹಿ.ಪ್ರಾ.ಶಾಲೆ ಕೊಡಚಿ
ಅಕ್ಟೋಬರ್2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರ ಜನ್ಮದಿನ. ವಿಶ್ವ ಅಹಿಂಸಾ ದಿನ ಎಂದು ವಿಶ್ವದೆಲ್ಲಡೆ ಆಚರಣೆ. ಇದೇ ದಿನದಂದೇ ಗಾಂಧೀ ಅವರ ಆಸೆಯಂತೆ ಗ್ರಾಮದೆಲ್ಲೆಡೆ ಸ್ವಚ್ಛತೆಯ ಜಾಗೃತಿಗಾಗಿ 'ಸ್ವಚ್ಛ ಭಾರತ ಅಭಿಯಾನ' ದ ಕಾರ್ಯಕ್ರಮ ಆಯೋಜಿಸಿದ್ದು ಗಾಂಧೀ ಅವರಿಗೊಂದು ಶ್ರಮ ನಮನ. ಅದರಂತೆ ಇಜೇರಿ ವಲಯದ ಶಾಲೆಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಹಂಮಿಕೊಳ್ಳಲಾಗಿತ್ತು. ಇದೇ ರೀತಿ ದಿ.07/10/2016 ರಂದು ಸಮುದಾಯ ದತ್ತ ಶಾಲಾ ಕಾರ್ಯಕ್ರಮದಲ್ಲಿ 'ವಿಶ್ವ ಕೈ ತೊಳೆವ ದಿನ' ಕೂಡ ಆಚರಿಸಲಾಯಿತು. ಕೈ ತೊಳೆವ ವಿಧಾನ ತಿಳಿಸಿ ಎಲ್ಲ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಸೋಪು ಬಳಸಿ ಕೈ ತೊಳೆಯುವಂತೆ ತಿಳಿಸಲಾಯಿತು.

Sunday, 16 October 2016

2016-17 ನೆಯ ಸಾಲಿನ 2ನೆಯ ಸೆಟ್ ಸಮವಸ್ತ್ರ ಅನುದಾನ ಹಾಗೂ ಖರೀದಿ ಮಾಹಿತಿ


ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ 16/09/2016


ದಿನಾಂಕ 16/09/2016 ರಂದು ಸ.ಹಿ.ಪ್ರಾ.ಶಾಲೆ ಯಾಳವಾರದಲ್ಲಿ ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಿತು. ಈ ಒಂದು ಸುಂದರ ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಮಹಾಂತಗೌಡ  ಎನ್. ಮಾಲಿ ಪಾಟೀಲ್ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ಮರೆಪ್ಪ ಬರ್ಮಾ ಅವರು ಆಯೋಜಿಸಿದ್ದರು. ಹಿಂದಿನ ದಿನವೇ ಶಾಲಾವರಣ ಹಾಗೂ ಶಾಲಾ ಕೋಣೆಗಳನ್ನು ಸಿಂಗರಿಸಿ ಎಲ್ಲಾ ವ್ಯವಸ್ಥೆಗಳನ್ನು ಏರ್ಪಾಡು ಮಾಡಿದ್ದರು.
    ಅಲ್ಲದೇ ಶಾಲೆಯ ಶಿಕ್ಷಕರಾದ ಶ್ರೀ ಶರಣಬಸವೇಶ್ವರ, ಶ್ರೀ ಕರೆಪ್ಪ, ಶ್ರೀ ಸಂಗಮೇಶ,ಶ್ರೀ ಇಮಾಮ್ ಸಾಬ ಮುಂತಾದವರನ್ನೊಳಗೊಂಡಂತೆ ಎಲ್ಲ  ಶಿಕ್ಷಕ ವೃಂದ ಪೂರ್ವಭಾವಿಯಾಗಿ ಎಲ್ಲ ಸಿದ್ಧತೆಗಳನ್ನು ಮಾಡಿ ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದರು.
 ಅಂದುಕೊಂಡಂತೆ 16/09/2016 ರ ಬೆಳಿಗ್ಗೆ 11.30 ಗಂಟೆಗೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟನಾ ಸಮಾರಂಭ ಪ್ರಾರಂಭವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಮಹಾಂತಗೌಡ ಮಾಲಿ ಪಾಟೀಲ್ ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಆಂದೋಲಾ ವಲಯದ ಜಿಲ್ಲಾ ಪಂಚಾಯತ್ ಸದಸ್ಯರ ಪರವಾಗಿ ಶ್ರೀ ಮಹಾದೇವಪ್ಪ ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಬಿ.ಪಾಟೀಲ್, ಕಾರ್ಯದರ್ಶಿಯಾದ ಶ್ರೀ ಗುಡುಲಾಲ್ ಶೇಖ, ಕ.ರಾ.ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿಯಾದ ಶ್ರೀ ಮರೆಪ್ಪ ಮೂಲಿಮನಿ ಹಾಗೂ ಇತರೆ ಸಂಘಗಳ ಪದಾಧಿಕಾರಿಗಳು ಹಾಗೂ ಇಜೇರಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್ ಕುಮಾರ ಹಿರೇಮಠ ಇವರು ಶ್ರೀ ನಾರಾಯಣ ಗುರು ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ತದನಂತರ  ಎಲ್ಲ ಗಣ್ಯರಿಗೆ ಸನ್ಮಾನಿಸಿ ಇಜೇರಿ ಸ.ಸಂ.ವ್ಯಕ್ತಿಗಳು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಗುಡುಲಾಲ್ ಶೇಖ್, ಶ್ರೀ ಮರೆಪ್ಪ ಮೂಲಿಮನಿ ಮುಂತಾದವರು ಮಾತನಾಡಿದರು. ಶ್ರೀ ಕರೆಪ್ಪ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಶರಣಬಸವೇಶ್ವರ ಸ್ವಾಗತಿಸಿದರು. ಶ್ರೀ ಅಫ್ಸರ್ ಮಿಯಾ ವಂದಿಸಿದರು.
 ಕಾರ್ಯಕ್ರಮದ ಕೆಲವು ಫೋಟೊಗಳು :