- ಮುಖಪುಟ
- ಸಾರ್ವಜನಿಕ ಶಿಕ್ಷಣ ಇಲಾಖೆ
- ನಂಮ ಶಾಲೆ ಬ್ಲಾಗ್
- ಶಿಕ್ಷಕ ಕಲ್ಯಾಣ ನಿಧಿ ವಿವರ
- ಶಿಕ್ಷಣವಾರ್ತೆ
- ಇಲಾಖೆಯಲ್ಲಿನ ವಿವಿಧ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳು
- ಶಿಕ್ಷಣ ಕಿರಣ(SATS)
- ಇಜೇರಿ OOSC ಮಾಹಿತಿ 2017-18
- ಶಿಕ್ಷಕರ ಸೇವಾ ವಿವರ
- ಸಂಪರ್ಕ ಮಾಹಿತಿ
- ಇಜೇರಿ ವಲಯದ ಶಾಲೆಗಳ ವಿವರ
- ಸುತ್ತೋಲೆಗಳು & ಹೊಸ ಮಾಹಿತಿಗಳು
- ಹಣಕಾಸು ವಿವರ
- ಶಾಲೆಗಳು & ಮುಖ್ಯೋಪಾಧ್ಯಾಯರುಗಳು
- ವಿಶೇಷ ಅಗತ್ಯತೆಯುಳ್ಳ ಮಕ್ಕಳ ಮಾಹಿತಿ
- ಸಭಾ ನಡೆವಳಿಗಳು
- ಫೋಟೊ ಗ್ಯಾಲರಿ
- ಬ್ಲಾಗ್ ರಚನೆ : ಸಚಿನ್ಕುಮಾರ ಹಿರೇಮಠ
- ಇದುವರೆಗಿನ ಸಿ.ಆರ್.ಪಿಗಳ ವಿವರ
ಪ್ರಮುಖ ಸಂದೇಶ
Wednesday, 12 July 2017
ಆತ್ಮ ಸಂತೃಪ್ತಿಗಾಗಿ ದುಡಿಯೋಣ : ರಾ.ಯೋ.ಸ.ನಿ ಮಂಜುಳಾ ಕಿವಿಮಾತು
![]() |
ರಾಜ್ಯ ಯೋಜನಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಅವರ ಜತೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು |
ಇಂದು ದಿ. 12/07/2017 ರಂದು ರಾಜ್ಯ ಯೋಜನಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಅವರು ಹೈದರಾಬಾದ್ - ಕರ್ನಾಟಕ ಭಾಗದಲ್ಲಿನ ಶಾಲೆಗಳಲ್ಲಿ 'ಗಣಿತ ಕಲಿಕಾ ಅಂದೋಲನ' ಕಿಟ್ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು. ಕೆಲ ಶಾಲೆಗಳಲ್ಲಿ ಸ್ವತಃ ತಾವೇ ಗಣಿತ ಕಲಿಕಾ ಅಂದೋಲನ ಕಿಟ್ ನ್ನು ಬಳಸಿ ಹೇಗೆ ಕಲಿಕೆಯನ್ನು ಅನುಕೂಲಿಸಬೇಂಕೆಂದು ಪ್ರದರ್ಶನ ನೀಡಿದರು.
ಬಳಿಕ ಜೇವರ್ಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಷಯಗಳ ಮೇಲೆ ಚರ್ಚಿಸಿದರು. ಸಿಆರ್ಪಿಗಳು ನಿರಂತರವಾಗಿ ಶಾಲೆಗಳನ್ನು ಸಂದರ್ಶಿಸಿ ಶಿಕ್ಷಕರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು. ಅಲ್ಲದೇ ಕ್ಲಸ್ಟರ್ ಕ್ರಿಯಾಯೋಜನೆ ತಯಾರಿಸಿ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗುವಂತೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹಗಲು ರಾತ್ರಿ ಸಿಆರ್ಪಿಗಳು SATS ಮಾಹಿತಿ ಅಪ್ ಡೇಟ್ ಮಾಡಿದುದ್ದಕ್ಕೆ ಅಭಿನಂದಿಸಿದ ಅವರು ಆತ್ಮ ಸಂತೃಪ್ತಿಗಾಗಿ ದುಡಿದಾಗ ಎಂತಹ ಸಮಸ್ಯೆಗಳೇ ಆಗಲಿ ತಂತಾನೇ ನಿವಾರಣೆಯಾಗುತ್ತವೆ ಎಂದು ಕಿವಿಮಾತು ಹೇಳಿದರು. ತಮ್ಮ ವೃತ್ತಿ ಜೀವನದ ಕೆಲವು ನಿದರ್ಶನಗಳನ್ನು ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿಯಾದ ಡಾ. ನಿಂಗರಾಜ ಮೂಲಿಮನಿ ಅವರು ಸಭೆಯ ಕೊನೆಯಲ್ಲಿ ವಂದಿಸಿ ಸಹಾಯಕ ನಿರ್ದೇಶಕರನ್ನು ಬೀಳ್ಕೊಟ್ಟರು.
Sunday, 9 July 2017
Friday, 7 July 2017
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆಯವರೊಂದಿಗೆ ಸಂವಾದ - ಕಲಬುರಗಿ
ಸಭೆಯನ್ನುದ್ಧೇಶಿಸಿ ಮಾತನಾಡಿದ ಶ್ರೀಮತಿ ಕೃಪಾ ಆಳ್ವ ಅವರು ಸರ್ಕಾರಿ ಶಾಲೆಗಳ ಉಳಿವು ಹಾಗೂ ಅಲ್ಲಿನ ಮಕ್ಕಳ ಹಕ್ಕುಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳಾದ ಶೌಚಾಲಯ,ಕಪ್ಪುಹಲಗೆ,ಕುಡಿಯುವ ನೀರು, ಶಾಲಾ ಕೊಠಡಿಗಳು,ಡೆಸ್ಕ್ ಗಳು ಮುಂತಾದವುಗಳನ್ನು ಒದಿಗಿಸಿಕೊಳ್ಳುವತ್ತ ಇಲಾಖೆ ಕಾರ್ಯಪ್ರವೃತ್ತವಾಗಬೇಕೆಂದು ತಿಳಿಸಿದರು.
ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪ್ರಗತಿಯನ್ನು ಹಂಚಿಕೊಂಡರು.
ಮುಂದುವರೆದು ಶ್ರೀಮತಿ ಕೃಪಾ ಅವರು, ಇಲಾಖೆ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ,ಡಿಜಿಟಲ್ ಶಿಕ್ಷಣ ಹಾಗೂ ಉತ್ತಮ ಸುರಕ್ಷಿತ ವಾತಾವರಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಜುಲೈ 31,2017ರೊಳಗಾಗಿ ಪ್ರತಿ ಶಾಲೆಯಲ್ಲಿ ಕನಿಷ್ಠ 150 ಸದಸ್ಯರಿರುವಂತೆ 'ಹಳೆಯ ವಿದ್ಯಾರ್ಥಿಗಳ ಸಂಘ' ರಚಿಸಿ,ಶಾಲೆಗೆ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸಬೇಕೆಂದು ಸೂಚಿಸಿದರು.
ಪೊಲೀಸ್ ಇಲಾಖೆಯವರು ವಾರಕ್ಕೊಮ್ಮ
ಸಮೀಪದ ಶಾಲೆಗೆ ತೆರಳಿ ಪಾಠಬೋಧನೆ ಮಾಡಿ ಎಂದ ಅವರ ಸಲಹೆಗೆ ಉತ್ತರಿಸಿದ ಎಸ್ ಪಿ ಶಶಿಕುಮಾರ,"ನಾವುಪಾಠ ಮಾಡುತ್ತೇವೆ,ಅದರಂತೆ ಶಿಕ್ಷಕರು ಕೆಲವು ಬಾರಿ ಬಂದೋಬಸ್ತ್ ಕೆಲಸ ಮಾಡಲಿ" ಎಂದು ನಗೆ ಚಟಾಕಿ ಹಾರಿಸಿದರು.
ಮಕ್ಕಳ ಹಕ್ಕುಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲ ಮನಸ್ಸು ಮಾಡಬೇಕು ಎನ್ನುತ್ತ ಸಭೆಗೆ ಮಂಗಲ ಹಾಡಲಾಯಿತು.
Monday, 3 July 2017
ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿಯ ಎಂ.ಆರ್.ಪಿ ಆಯ್ಕೆಗಾಗಿ ಮುಖ್ಯೋಪಾಧ್ಯಾಯರ ಸಭೆ ಜೇವರಗಿ
ದಿ.01/07/2017 ರಂದು ಬ್ಲಾಕ್ ಹಂತದಲ್ಲಿ ಒಂದು ದಿನದ ಶಿಕ್ಷಕರ ವೃತ್ತಿಪರ ಅಭಿವೃದ್ಧಿ(TEACHERS PROFESSIONAL DEVELOPMENT) ತರಬೇತಿಯ ಎಂ.ಆರ್.ಪಿ ಆಯ್ಕೆಗಾಗಿ ಮುಖ್ಯೋಪಾಧ್ಯಾಯರ ಸಭೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೇವರ್ಗಿಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಡಾ. ನಿಂಗರಾಜ ಮೂಲಿಮನಿ ವಹಿಸಿಕೊಂಡಿದ್ದರು.ನೊಡಲ್ ಅಧಿಕಾರಿಯಾಗಿ DIETನ ಶ್ರೀ ಗೋಪಾಲಕೃಷ್ಣ, ಶಿಕ್ಷಣ ಸಂಯೋಜಕರಾದ ಶ್ರೀ ಮೋನಪ್ಪ ಬಡಿಗೇರ, ಶ್ರೀ ಕೇಶವಸಿಂಗ್ ರಾಠೋಡ್,ಶ್ರೀಮತಿ ಶರಣಮ್ಮ ಇನಾಂದಾರ್, ಕ್ಷೇತ್ರ ಸಂಪನ್ಮೂಲ
ವ್ಯಕ್ತಿಯಾದ ಶ್ರೀ ಮನೋಹರ ಹಾಗೂ ಐ.ಇ.ಆರ್.ಟಿಯ ಶ್ರೀಮತಿ ಮಹಾನಂದ ಅವರು ಅತಿಥಿ ಸ್ಥಾನ ವಹಿಸಿಕೊಂಡಿದ್ದರು. ಟಿಪಿಡಿಯ ಬಗ್ಗೆ ವಿಸ್ತಾರವಾಗಿ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಲಾಯಿತು. ಅಂದೋಲಾ,ಅಂಕಲಗಾ,ಬಿಳವಾರ,ಜೇವರಗಿ(ಉ),ಜೇವರಗಿ(ದ),ಗಂವ್ಹಾರ,ಹಿಪ್ಪರಗಾ,ಇಜೇರಿ, ಕೋಳಕೂರ,ಮಂದೇವಾಲ ಹಾಗೂ ನರಿಬೋಳ ಕ್ಲಸ್ಟರ್ ನ ಸಿ.ಆರ್.ಪಿ ಗಳು ಹಾಗೂ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.
Subscribe to:
Posts (Atom)