![]() |
ರಾಜ್ಯ ಯೋಜನಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಅವರ ಜತೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು |
ಇಂದು ದಿ. 12/07/2017 ರಂದು ರಾಜ್ಯ ಯೋಜನಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಅವರು ಹೈದರಾಬಾದ್ - ಕರ್ನಾಟಕ ಭಾಗದಲ್ಲಿನ ಶಾಲೆಗಳಲ್ಲಿ 'ಗಣಿತ ಕಲಿಕಾ ಅಂದೋಲನ' ಕಿಟ್ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು. ಕೆಲ ಶಾಲೆಗಳಲ್ಲಿ ಸ್ವತಃ ತಾವೇ ಗಣಿತ ಕಲಿಕಾ ಅಂದೋಲನ ಕಿಟ್ ನ್ನು ಬಳಸಿ ಹೇಗೆ ಕಲಿಕೆಯನ್ನು ಅನುಕೂಲಿಸಬೇಂಕೆಂದು ಪ್ರದರ್ಶನ ನೀಡಿದರು.
ಬಳಿಕ ಜೇವರ್ಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಷಯಗಳ ಮೇಲೆ ಚರ್ಚಿಸಿದರು. ಸಿಆರ್ಪಿಗಳು ನಿರಂತರವಾಗಿ ಶಾಲೆಗಳನ್ನು ಸಂದರ್ಶಿಸಿ ಶಿಕ್ಷಕರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು. ಅಲ್ಲದೇ ಕ್ಲಸ್ಟರ್ ಕ್ರಿಯಾಯೋಜನೆ ತಯಾರಿಸಿ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗುವಂತೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹಗಲು ರಾತ್ರಿ ಸಿಆರ್ಪಿಗಳು SATS ಮಾಹಿತಿ ಅಪ್ ಡೇಟ್ ಮಾಡಿದುದ್ದಕ್ಕೆ ಅಭಿನಂದಿಸಿದ ಅವರು ಆತ್ಮ ಸಂತೃಪ್ತಿಗಾಗಿ ದುಡಿದಾಗ ಎಂತಹ ಸಮಸ್ಯೆಗಳೇ ಆಗಲಿ ತಂತಾನೇ ನಿವಾರಣೆಯಾಗುತ್ತವೆ ಎಂದು ಕಿವಿಮಾತು ಹೇಳಿದರು. ತಮ್ಮ ವೃತ್ತಿ ಜೀವನದ ಕೆಲವು ನಿದರ್ಶನಗಳನ್ನು ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿಯಾದ ಡಾ. ನಿಂಗರಾಜ ಮೂಲಿಮನಿ ಅವರು ಸಭೆಯ ಕೊನೆಯಲ್ಲಿ ವಂದಿಸಿ ಸಹಾಯಕ ನಿರ್ದೇಶಕರನ್ನು ಬೀಳ್ಕೊಟ್ಟರು.
No comments:
Post a Comment