ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Friday, 7 July 2017

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆಯವರೊಂದಿಗೆ ಸಂವಾದ - ಕಲಬುರಗಿ






ದಿ.05/07/2017 ರಂದು ಕಲಬುರಗಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಶಿಕ್ಷಣಾಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆಯಾದ ಶ್ರೀಮತಿ ಕೃಪಾ ಆಳ್ವಾ,ಜಿಲ್ಲಾಧಿಕಾರಿಯಾದ ಉಜ್ವಲಕುಮಾರ್ ಘೋಷ್,ಜಿಲ್ಲಾ ಪಂಚಾಯಿತಿ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ,ಎಸ್ ಪಿ ಶಶಿಕುಮಾರ ಮುಂತಾದವರು ಹಾಜರಿದ್ದರು.

    ಸಭೆಯನ್ನುದ್ಧೇಶಿಸಿ ಮಾತನಾಡಿದ ಶ್ರೀಮತಿ ಕೃಪಾ ಆಳ್ವ ಅವರು ಸರ್ಕಾರಿ ಶಾಲೆಗಳ ಉಳಿವು ಹಾಗೂ ಅಲ್ಲಿನ ಮಕ್ಕಳ ಹಕ್ಕುಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳಾದ  ಶೌಚಾಲಯ,ಕಪ್ಪುಹಲಗೆ,ಕುಡಿಯುವ ನೀರು, ಶಾಲಾ ಕೊಠಡಿಗಳು,ಡೆಸ್ಕ್ ಗಳು ಮುಂತಾದವುಗಳನ್ನು ಒದಿಗಿಸಿಕೊಳ್ಳುವತ್ತ ಇಲಾಖೆ ಕಾರ್ಯಪ್ರವೃತ್ತವಾಗಬೇಕೆಂದು ತಿಳಿಸಿದರು.
 ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪ್ರಗತಿಯನ್ನು ಹಂಚಿಕೊಂಡರು.
 ಮುಂದುವರೆದು ಶ್ರೀಮತಿ ಕೃಪಾ ಅವರು, ಇಲಾಖೆ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ,ಡಿಜಿಟಲ್ ಶಿಕ್ಷಣ ಹಾಗೂ ಉತ್ತಮ ಸುರಕ್ಷಿತ ವಾತಾವರಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಜುಲೈ 31,2017ರೊಳಗಾಗಿ ಪ್ರತಿ ಶಾಲೆಯಲ್ಲಿ ಕನಿಷ್ಠ 150 ಸದಸ್ಯರಿರುವಂತೆ 'ಹಳೆಯ ವಿದ್ಯಾರ್ಥಿಗಳ ಸಂಘ' ರಚಿಸಿ,ಶಾಲೆಗೆ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸಬೇಕೆಂದು ಸೂಚಿಸಿದರು.
ಪೊಲೀಸ್ ಇಲಾಖೆಯವರು ವಾರಕ್ಕೊಮ್ಮ
 ಸಮೀಪದ ಶಾಲೆಗೆ ತೆರಳಿ ಪಾಠಬೋಧನೆ ಮಾಡಿ ಎಂದ ಅವರ ಸಲಹೆಗೆ ಉತ್ತರಿಸಿದ ಎಸ್ ಪಿ ಶಶಿಕುಮಾರ,"ನಾವುಪಾಠ ಮಾಡುತ್ತೇವೆ,ಅದರಂತೆ ಶಿಕ್ಷಕರು ಕೆಲವು ಬಾರಿ ಬಂದೋಬಸ್ತ್ ಕೆಲಸ ಮಾಡಲಿ" ಎಂದು ನಗೆ ಚಟಾಕಿ ಹಾರಿಸಿದರು.

 ಮಕ್ಕಳ ಹಕ್ಕುಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲ ಮನಸ್ಸು ಮಾಡಬೇಕು ಎನ್ನುತ್ತ ಸಭೆಗೆ ಮಂಗಲ ಹಾಡಲಾಯಿತು.



No comments:

Post a Comment