ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Monday, 3 July 2017

ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿಯ ಎಂ.ಆರ್.ಪಿ ಆಯ್ಕೆಗಾಗಿ ಮುಖ್ಯೋಪಾಧ್ಯಾಯರ ಸಭೆ ಜೇವರಗಿ

ದಿ.01/07/2017 ರಂದು ಬ್ಲಾಕ್ ಹಂತದಲ್ಲಿ ಒಂದು ದಿನದ ಶಿಕ್ಷಕರ ವೃತ್ತಿಪರ ಅಭಿವೃದ್ಧಿ(TEACHERS PROFESSIONAL DEVELOPMENT) ತರಬೇತಿಯ ಎಂ.ಆರ್.ಪಿ ಆಯ್ಕೆಗಾಗಿ ಮುಖ್ಯೋಪಾಧ್ಯಾಯರ ಸಭೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೇವರ್ಗಿಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಡಾ. ನಿಂಗರಾಜ ಮೂಲಿಮನಿ ವಹಿಸಿಕೊಂಡಿದ್ದರು.ನೊಡಲ್ ಅಧಿಕಾರಿಯಾಗಿ DIETನ ಶ್ರೀ ಗೋಪಾಲಕೃಷ್ಣ,  ಶಿಕ್ಷಣ ಸಂಯೋಜಕರಾದ ಶ್ರೀ ಮೋನಪ್ಪ ಬಡಿಗೇರ, ಶ್ರೀ ಕೇಶವಸಿಂಗ್ ರಾಠೋಡ್,ಶ್ರೀಮತಿ ಶರಣಮ್ಮ ಇನಾಂದಾರ್, ಕ್ಷೇತ್ರ ಸಂಪನ್ಮೂಲ
ವ್ಯಕ್ತಿಯಾದ ಶ್ರೀ ಮನೋಹರ ಹಾಗೂ ಐ.ಇ.ಆರ್.ಟಿಯ ಶ್ರೀಮತಿ ಮಹಾನಂದ ಅವರು ಅತಿಥಿ ಸ್ಥಾನ ವಹಿಸಿಕೊಂಡಿದ್ದರು. ಟಿಪಿಡಿಯ ಬಗ್ಗೆ  ವಿಸ್ತಾರವಾಗಿ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಲಾಯಿತು. ಅಂದೋಲಾ,ಅಂಕಲಗಾ,ಬಿಳವಾರ,ಜೇವರಗಿ(ಉ),ಜೇವರಗಿ(ದ),ಗಂವ್ಹಾರ,ಹಿಪ್ಪರಗಾ,ಇಜೇರಿ, ಕೋಳಕೂರ,ಮಂದೇವಾಲ ಹಾಗೂ ನರಿಬೋಳ ಕ್ಲಸ್ಟರ್ ನ ಸಿ.ಆರ್.ಪಿ ಗಳು ಹಾಗೂ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

No comments:

Post a Comment