ಪ್ರಮುಖ ಸಂದೇಶ

ಎಲ್ಲ ಶಿಕ್ಷಕರು ತಮ್ಮ ವರ್ಕ್ ಫ್ರಂ ಹೋಮ್ ಕೆಲಸಗಳನ್ನು ತಮ್ಮ ವೈಯಕ್ತಿಕ ಬ್ಲಾಗ್ ಗೆ ಅಪಲೋಡ್ ಮಾಡುವುದು ಕಡ್ಡಾಯ. ಮುಖ್ಯಶಿಕ್ಷಕರು ತಮ್ಮ ಶಾಲಾ ಬ್ಲಾಗ್ ರಚಿಸಿ ಅದರಲ್ಲಿ ತಮ್ಮ ಶಿಕ್ಷಕರ ಬ್ಲಾಗ್‌ಗಳನ್ನು ಲಿಂಕ್ ಮಾಡುವುದು.

Sunday, 1 October 2017

ಗುರು ಚೇತನ ತರಬೇತಿ ನಿಮಿತ್ತ ಕ್ಲಸ್ಟರ್ ಸಮಾಲೋಚನಾ ಸಭೆ 23/09/2017

 ದಿ.23/09/2017 ರಂದು ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಾಳವಾರದಲ್ಲಿ ಗುರುಚೇತನ ತರಬೇತಿಗೆ ಸಂಬಂಧಿಸಿದಂತೆ ಕ್ಲಸ್ಟರ್ ಸಮಾಲೋಚನಾ ಸಭೆಯ ವಿಡಿಯೋ.

ಝೊಹೊ ಆ್ಯಪ್ - ಗುರು ಚೇತನ ತರಬೇತಿ ಮಾಡ್ಯೂಲ್ಗಳ ಆಯ್ಕೆ

ಝೊಹೊ ಕ್ರಿಯೇಟರ್ ಆ್ಯಪ್ ಬಳಸಿ ಗುರು ಚೇತನ ತರಬೇತಿ ಮಾಡ್ಯೂಲ್ ಗಳ‌ ಆಯ್ಕೆ ಮಾಡಿಕೊಳ್ಳಲು ಈ ಮೇಲಿನ ವಿಡಿಯೋ ನೋಡಿ. ನಮ್ಮ ಎಜ್ಯೂಕೇರ್ ಮೀಡಿಯಾ ಪ್ಲಸ್ ಯೂ ಟ್ಯೂಬ್ ಚಾನೆಲ್ ಗೆ‌ ಸಬ್ಸ್ಕ್ರೈಬ್ ಆಗಿರಿ.

ಪ್ರತಿಭಾ ಕಾರಂಜಿ 2017-18

Please Subscribe my YouTube channel - Educare Media Plus

ಸರ್ಕಾರಿ ಶಾಲೆಗಳ ಸಬಲೀಕರಣ

Educare Media Plus ಯೂ ಟ್ಯೂಬ್ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿರಿ

Sunday, 3 September 2017

ಶಿಕ್ಷಕರಿಗಾಗಿ ಸಾಂಸ್ಕೃತಿಕ ಸಂಪನ್ಮೂಲ ತರಬೇತಿ

ದಿ.23/08/2017 ರಂದು ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟಗೊಂಡ ಲೇಖನ..

Sunday, 20 August 2017

ಇಜೇರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ವಿಜ್ಞಾನ ಸ್ಪರ್ಧೆಗಳು 2017-18

ದಿ. 17/08/2017 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಜೇರಿಯಲ್ಲಿ ಇಜೇರಿ ವಲಯ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ವಿಜ್ಞಾನ ಸ್ಪರ್ಧೆಗಳ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಜೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮೋನಪ್ಪ ಸುತಾರ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶ್ರೀ ಗುಡುಲಾಲ್ ಶೇಖ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜೇವರ್ಗಿ ತಾಲೂಕಾ ಘಟಕದ ಗೌರವಾಧ್ಯಕ್ಷರಾದ ಶ್ರೀ ಮಹಾಂತಗೌಡ  ಎನ್. ಮಾಲಿಪಾಟೀಲ್, ಸ.ಪ್ರೌ.ಶಾಲೆ ಇಜೇರಿ ಮುಖ್ಯೋಪಾಧ್ಯಾಯರಾದ ಶ್ರೀ ಶಿವಲಿಂಗಪ್ಪ ದುಮ್ಮದ್ರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀ ಗುರುನಾಥ ಸಜ್ಜನಶೆಟ್ಟಿ, ಶ್ರೀ ಫತ್ರು ಪಟೇಲ್ ಹಾಗೂ ವಲಯದ ಎಲ್ಲ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಶ್ರೀ ಕರೆಪ್ಪ ಸ.ಶಿ ಇವರು ಎಲ್ಲರನ್ನು ಸ್ವಾಗತಿಸಿದರು.  ನಿರೂಪಕರಾದ ಶ್ರೀ ಶರಣಬಸವೇಶ್ವರ ಸ.ಶಿ ಇವರು ಪ್ರಾರ್ಥನೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.  ಸಮೂಹ ಸಂಪನ್ಮೂಲ ಕೇಂದ್ರ ಇಜೇರಿಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಚಿನ್ ಕುಮಾರ ಹಿರೇಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಪ್ರತಿಭಾ ಕಾರಂಜಿಯ ಮಹತ್ವದ ಬಗ್ಗೆ ಶ್ರೀ ಗುಡುಲಾಲ್ ಶೇಖ್ ಮಾತನಾಡುತ್ತ,'ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆ' ಎಂದರು. ಬಳಿಕ ಶ್ರೀ ಮಹಾಂತಗೌಡ ಎನ್. ಮಾಲಿಪಾಟೀಲ್ ಅವರು ತಮ್ಮ ಜನಪದ ಗಾಯನದ ಮೂಲಕ 'ಎಲ್ಲರೂ ನಿರ್ಭಿಢೆಯಿಂದ ಪ್ರತಿಭಾ ಪ್ರದರ್ಶನ ಮಾಡಬೇಕು' ಎಂದು ಹೇಳಿದರು.
ಕಾರ್ಯಕ್ರಮ ಆಯೋಜನೆಯಲ್ಲಿ ನೆರವಾದ ಎಲ್ಲ ಮುಖ್ಯಗುರುಗಳು,ಸಹಶಿಕ್ಷಕರು, ವಿಶೇಷವಾಗಿ ಶ್ರೀ ರಮೇಶ ಮಠದ್ ಹಾಗೂ ಪತ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾದ  ಎಲ್ಲರಿಗೂ ವಂದನೆಗಳನ್ನು ಅರ್ಪಿಸಲಾಯಿತು.

ವೈಯಕ್ತಿಕ ವಿಭಾಗ(1-4)
ಕಂಠಪಾಠ(ಕನ್ನಡ)
1. ನಿರ್ಮಲಾ ಈರಪ್ಪ,ಸ.ಹಿ.ಪ್ರಾ.ಶಾಲೆ ಯಾಳವಾರ,೪ನೆಯ
2. ಸಾಕ್ಷಿ ಬಸವರಾಜ,ಸ.ಹಿ.ಪ್ರಾ.ಶಾಲೆ ಗೂಗಿಹಾಳ,೩ನೆಯ
3. ಅಕ್ಷತಾ ಸಿದ್ಧರಾಮ, ಸ.ಕಿ.ಪ್ರಾಶಾಲೆ ಚಿಗರಳ್ಳಿ,೪ನೆಯ

ಕಂಠಪಾಠ(ಇಂಗ್ಲಿಷ್)
1. ಸಮೀರ ಮಹಿಬೂಬ,ಜ್ಞಾನಜ್ಯೋತಿ ಹಿ.ಪ್ರಾ.ಶಾಲೆ ಇಜೇರಿ,೩ನೆಯ
2. ಕೌಸರಬೇಗಂ ಮಸ್ತಾನ ಪಟೇಲ್,ಸ.ಕಿ.ಪ್ರಾ.ಶಾಲೆ ಚಿಗರಳ್ಳಿ ಕ್ಯಾಂಪ್,೪ನೆಯ
3. ಭಾಗ್ಯಶ್ರೀ ಶರಣಗೌಡ,ಸ.ಹಿ.ಪ್ರಾ.ಶಾಲೆ ಇಜೇರಿ,೪ನೆಯ

ಕಂಠಪಾಠ(ಉರ್ದು)
1. ಸಾನಿಯ ಅಕ್ಬರ್,ಸ.ಹಿ‌ಪ್ರಾ.ಶಾಲೆ ಇಜೇರಿ,೪ನೆಯ
2.ಸಾನಿಯ ಅಮೀರ ಹಮ್ಜಾ, ಸ.ಉ.ಹಿ.ಪ್ರಾ.ಶಾಲೆ ಇಜೇರಿ,೪ನೆಯ
3.ರಿಜ್ವಾನ್ ರಫೀಕ್,ಸ.ಕಿ.ಪ್ರಾ.ಶಾಲೆ ಚಿಗರಳ್ಳಿ ಕ್ಯಾಂಪ್,೩ನೆಯ

ಧಾರ್ಮಿಕ ಪಠಣ(ಅರೇಬಿಕ್)
1. ಶಿರಾಜ್ ಮಹಿಬೂಬ,ಜ್ಞಾನಜ್ಯೋತಿ ಇಜೇರಿ
2.ಪರವಿನ್ ಬೇಗಂ ಮಹಿಬೂಬ,ಸ.ಹಿ.ಪ್ರಾ.ಶಾಲೆ ಯಾಳವಾರ

ಲಘು ಸಂಗೀತ
1.ಸಾವಿತ್ರಿ ಬಸವಾರಾಜ,ಬಿ.ಎಂ.ಹಿ.ಪ್ರಾ.ಇಜೇರಿ,೩ನೆಯ
2.ವೀರೇಶ ಶರಣಪ್ಪ, ಸ.ಹಿ.ಪ್ರಾಶಾಲೆ ಲಖಣಾಪೂರ,೪ನೆಯ


ಛಧ್ಮವೇಷ
1.ಭಾಗ್ಯಶ್ರೀ ರಾಜೇಂದ್ರ,ಸ.ಕಿ.ಪ್ರಾಶಾಲೆ ಭೀಮನಗರ ಇಜೇರಿ,೪ನೆಯ
2.ವಿಶ್ವಾರಾಧ್ಯ,ಸ.ಹಿ.ಪ್ರಾ.ಶಾಲೆ ಯಾಳವಾರ,೪ನೆಯ
2. ಸಾಕ್ಷಿ, ಸ.ಹಿ.ಪ್ರಾ.ಶಾಲೆ ಗೂಗಿಹಾಳ

ಕಥೆ ಹೇಳುವುದು
1.ಮಾದೇಶ,ಜ್ಞಾನಜ್ಯೋತಿ ಇಜೇರಿ,೪ನೆಯ
2.ಪ್ರೇಮ,ಸ.ಕಿ.ಪ್ರಾ.ಶಾಲೆಭಿಮನಗರ ಇಜೇರಿ,೪ನೆಯ
3.ಗೀತಾ,ಬಿ.ಎಂ.ಹಿ.ಪ್ರಾ.ಶಾಲೆ ಇಜೇರಿ,೩ನೆಯ


ಅಭಿನಯ ಗೀತೆ
1. ಅನ್ನಪೂರ್ಣ,ಸ.ಹಿ.ಪ್ರಾ.ಶಾಲೆ ಯಾಳವಾರ,೨ನೆಯ
2. ರೇಖಾ,ಸ.ಹಿ.ಪ್ರಾ.ಶಾಲೆ ಇಜೇರಿ,೩ನೆಯ
3. ಬೋರಮ್ಮ, ಸ.ಕಿ.ಪ್ರಾ.ಶಾಲೆ ಸೋಮನಾಥಹಳ್ಳಿ,೪ನೆಯ

ಭಕ್ತಿಗೀತೆ
1. ಕೃಷ್ಣ,ಸ.ಹಿ.ಪ್ರಾ.ಶಾಲೆ ಲಖಣಾಪೂರ,೪ನೆಯ
2. ಶರಣಮ್ಮ,ಸ.ಹಿ.ಪ್ರಾ.ಶಾಲೆ ಕೊಡಚಿ,೪ನೆಯ
2. ಗಾಯತ್ರಿ, ಸ.ಕಿ.ಪ್ರಾಶಾಲೆ ಗೂಗಿಹಾಳ ತಾಂಡ,೪ನೆಯ
3. ವೀರೇಶ,ಸ.ಹಿ.ಪ್ರಾ.ಶಾಲೆ ಕೊಡಚಿ,೪ನೆಯ

ಆಶುಭಾಷಣ
1.ಗಣೇಶ,ಬಿ.ಎಂ.ಹಿ.ಪ್ರಾ.ಶಾಲೆ ಇಜೇರಿ, ೪ನೆಯ
2. ಗುರುಸ್ವಾಮಿ,ಜ್ಞಾನಜ್ಯೋತಿ ಇಜೇರಿ,೪ನೆಯ
3. ಭಾಗ್ಯಶ್ರೀ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ,೪ನೆಯ


ಚಿತ್ರಕಲೆ
1.ಪ್ರಕಾಶ,ಸ.ಹಿ.ಪ್ರಾ.ಶಾಲೆ ಗೂಗಿಹಾಳ,೪ನೆಯ
2.ಆಕಾಶ,ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡ,೪ನೆಯ
3.ರೂಪಾ,ಸ.ಹಿ.ಪ್ರಾ.ಶಾಲೆ ಇಜೇರಿ,೪ನೆಯ


ಕ್ಲೇ ಮಾಡೆಲಿಂಗ್
1.ಸಂತೋಷ, ಸ.ಹಿ.ಪ್ರಾ.ಶಾಲೆ ಇಜೇರಿ


ಸಾಮೂಹಿಕ ವಿಭಾಗ : 1 ರಿಂದ 4

ಜಾನಪದ ನೃತ್ಯ :
1. ಪಲ್ಲವಿ ಮತ್ತು ಸಂಗಡಿಗರು, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ
2 ಜ್ಯೋತಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
3. ಸಿದ್ದಮ್ಮ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ

ದೇಶಭಕ್ತಿ ಗೀತೆ :
1. ಪ್ರೀತಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
2. ಸಿದ್ದಮ್ಮ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ

ಕೋಲಾಟ :
1. ಜ್ಯೋತಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ
2. ಭಾಗ್ಯಲಕ್ಷ್ಮೀ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
3. ಪವನಕುಮಾರ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ

ಕ್ವಿಝ್ :
1. ರುಚಿತಾ ಮತ್ತು ಸಾನಿಯ, ಸ.ಹಿ.ಪ್ರಾ.ಶಾಲೆ, ಇಜೇರಿ
2. ರಾಜೇಶ್ವರಿ ಮತ್ತು ಈರಮ್ಮ, ಸ.ಹಿ.ಪ್ರಾ.ಕೊಡಚಿ





ವೈಯಕ್ತಿಕ ವಿಭಾಗ :5 ರಿಂದ 7
1. ಕಂಠಪಾಠ(ಕನ್ನಡ):
1. ಭುವನೇಶ್ವರಿ, ಸ.ಹಿ.ಪ್ರಾ.ಶಾಲೆ ಯಾಳವಾರ,7ನೇ
2. ಈರಪ್ಪ, ಸ.ಹಿ.ಪ್ರಾ.ಶಾಲೆ ಇಜೇರಿ,6ನೇ
3. ವಿದ್ಯಾಶ್ರೀ, ಸ.ಹಿ.ಪ್ರಾ.ಶಾಲೆ ಗೂಗಿಹಾಳ,6ನೇ
3. ಮಲ್ಲಮ್ಮ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ

ಕಂಠಪಾಠ(ಇಂಗ್ಲಿಷ್);
1. ಸಿದ್ದಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ,5ನೇ
2. ಸುಧಾ, ಸ.ಹಿ.ಪ್ರಾ.ಶಾಲೆ ಯಾಳವಾರ, 5ನೇ
3. ಮೇಘಾ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 7ನೇ
3. ರಮೇಶ, ಸ.ಹಿ.ಪ್ರಾ.ಶಾಲೆ ಇಜೇರಿ, 6ನೇ

ಕಂಠಪಾಠ(ಹಿಂದಿ):
1. ಶ್ವೇತಾ, ಸ.ಹಿ.ಪ್ರಾ.ಶಾಲೆ ಯಾಳವಾರ, 6ನೇ
2. ಬಸಮ್ಮ, ಸ.ಹಿ.ಪ್ರಾ.ಶಾಲೆ ಲಖಣಾಪೂರ, 7ನೇ
2. ವಚನಾ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
3. ಐಶ್ವರ್ಯ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 7ನೇ

ಕಂಠಪಾಠ(ಉರ್ದು):
1. ಮಾಲನ್ ಬೇಗಂ.ಸ.ಉ.ಹಿ.ಪ್ರಾ.ಶಾಲೆ ಇಜೇರಿ,7ನೇ
2. ನೇಹಾ ಅಂಜುಮ್, ಸ.ಹಿ.ಪ್ರಾ.ಶಾಲೆ ಕೊಡಚಿ,7ನೇ


2. ಧಾರ್ಮಿಕ ಪಠಣ(ಸಂಸ್ಕೃತ/ಅರೇಬಿಕ್)
1. ಖಾದಿರ್ ಪಟೇಲ್,ಸ.ಉ.ಹಿ.ಪ್ರಾ.ಶಾಲೆ ಇಜೇರಿ,7ನೇ
2. ಗಂಗಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ,5ನೇ
3. ಭಾಗ್ಯಶ್ರೀ,ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ

3. ಲಘು ಸಂಗೀತ:
1. ವೆಂಕಟೇಶ, ಸ.ಹಿ.ಪ್ರಾ.ಶಾಲೆ ಲಖಣಾಪೂರ, 6ನೇ
2. ಯಲ್ಲಮ್ಮ, ಸ.ಹಿ.ಪ್ರಾ.ಶಾಲೆ ಕೊಡಚಿ, 5ನೇ
3. ಬಸಮ್ಮ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 6ನೇ

4. ಛದ್ಮ ವೇಷ:
1. ನಿಂಗಮ್ಮ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
2. ಗಂಗಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ, 5ನೇ
3. ದಿವ್ಯ, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ

5. ಕಥೆ ಹೇಳುವುದು:
1. ವಿಶ್ವನಾಥ, ಸ.ಹಿ.ಪ್ರಾ.ಶಾಲೆ ಇಜೇರಿ, 7ನೇ
2. ವಿನೋದ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 7ನೇ

6. ಅಭಿನಯ ಗೀತೆ:
1. ಭಾಗ್ಯಶ್ರೀ, ಸ.ಹಿ.ಪ್ರಾ.ಶಾಲೆ ಇಜೇರಿ, 5ನೇ

7. ಭಕ್ತಿ ಗೀತೆ:
1. ದಿವ್ಯ, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ, 5ನೇ
2. ಶರಣಮ್ಮ, ಸ.ಹಿ.ಪ್ರಾ.ಶಾಲೆ ಇಜೇರಿ, 5ನೇ
3. ಶರಣಮ್ಮ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 6ನೇ

8. ಆಶು ಭಾಷಣ :
1. ಶರಣಮ್ಮ , ಸ.ಹಿ.ಪ್ರಾ.ಶಾಲೆ ಇಜೇರಿ, 5ನೇ
2. ಗಂಗಮ್ಮ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ, 5ನೇ

9. ಚಿತ್ರಕಲೆ:
1. ಶಾಂತಲಿಂಗಯ್ಯ, ಸ.ಹಿ.ಪ್ರಾ.ಶಾಲೆ ಯಾಳವಾರ, 7 ನೇ
2. ರೋಹಿತ, .ಸಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ, 5ನೇ
3. ಚೇತನ, ಸ.ಹಿ.ಪ್ರಾ.ಶಾಲೆ ಲಖಣಾಪೂರ, 7ನೇ

10. ಕ್ಲೇ ಮಾಡೆಲಿಂಗ್ :
1. ಶರಣಬಸವೇಶ್ವರ, ಸ.ಹಿ.ಪ್ರಾ.ಶಾಲೆ ಯಾಳವಾರ, 7ನೇ
2. ವಿಶ್ವಾರಾದ್ಯ, ಸ.ಹಿ.ಪ್ರಾ.ಶಾಲೆ ಇಜೇರಿ, 6ನೇ
3. ಮಾಳಪ್ಪ, ಸ.ಕಿ.ಪ್ರಾ.ಶಾಲೆ ಭೀಮನಗರ ಇಜೇರಿ, 5ನೇ





ಸಾಮೂಹಿಕ ವಿಭಾಗ: 5 ರಿಂದ 7
ಜಾನಪದ ನೃತ್ಯ :
1. ಸುಧಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ,
2. ರತ್ನಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ,
3. ದಿವ್ಯಾ ಮತ್ಉ ಸಂಗಡಿಗರು, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ

ಕೋಲಾಟ :
1. ಶಿಲ್ಪ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
2. ದಿವ್ಯಾ ಮತ್ತು ಸಂಗಡಿಗರು, ಸ.ಕಿ.ಪ್ರಾ.ಶಾಲೆ ಗೂಗಿಹಾಳ ತಾಂಡಾ
3. ಅಶ್ವಿನಿ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಲಖಣಾಪೂರ

ದೇಶಭಕ್ತಿ ಗೀತೆ :
 1. ಸುಧಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ
2. ಐಶ್ವರ್ಯ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ
3. ಶರಣಮ್ಮ ಮತ್ತುಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ

ಕ್ವಿಝ್ :
1. ದೇವರಾಜ  ಮತ್ತು ಲಕ್ಷ್ಮೀ, ಸ.ಹಿ.ಪ್ರಾ.ಶಾಲೆ ಯಾಳವಾರ
2. ವಿದ್ಯಾಶ್ರೀ ಮತ್ತು ಮೇಘಾ, ಸ.ಹಿ.ಪ್ರಾ.ಶಾಲೆ ಗೂಗಿಹಾಳ
3. ದರ್ಶನ ಮತ್ತು ಇಮ್ರಾನ್, ಬಿ.ಎಂ.ಗೌಡ ಹಿ.ಪ್ರಾ.ಶಾಲೆ ಇಜೇರಿ

ಕವ್ವಾಲಿ :
1. ಹೀನಾ ಕೌಸರ್ ಮತ್ತು ಸಂಗಡಿಗರು, ಸ.ಉ.ಹಿ.ಪ್ರಾ.ಶಾಲೆ ಇಜೇರಿ





ವೈಯಕ್ತಿಕ ವಿಭಾಗ 8 ರಿಂದ 10

ಜಾನಪದ ಗೀತೆ:
1. ಚಂದಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ,8ನೇ
2. ಪ್ರಿಯಾಂಕಾ, ಸ.ಪ್ರೌ.ಶಾಲೆ ಇಜೇರಿ, 10ನೇ
3. ಹಣಮಂತ, ಸ.ಹಿ.ಪ್ರಾ.ಶಾಲೆ ಗೂಗಿಹಾಳ,8ನೇ

ಭಾವಗೀತೆ :
1. ಅಂಬಿಕಾ, ಸ.ಪ್ರೌ.ಶಾಲೆ ಇಜೇರಿ, 8ನೇ
2. ಚಂದಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ,8ನೇ
3. ಶಿವರಾಜ,ಸಪ್ರೌ.ಶಾಲೆ ಇಜೇರಿ, 8ನೇ

ಗಝಲ್:
1. ಆಸ್ಮಾ, ಸ.ಉ.ಹಿ.ಪ್ರಾ.ಶಾಲೆ ಇಜೇರಿ,8ನೇ
2. ರೇಶ್ಮಾ, ಸ.ಪ್ರೌ.ಶಾಲೆ ಇಜೇರಿ, 9ನೇ

ಧಾರ್ಮಿಕ ಪಠಣ(ಅರೇಬಿಕ್) :
1. ರೇಶ್ಮಾ, ಸ.ಪ್ರೌ.ಶಾಲೆ ಇಜೇರಿ, 9ನೇ
2. ಆಸ್ಮಾ, ಸ.ಉ.ಹಿ.ಪ್ರಾ.ಶಾಲೆ ಇಜೇರಿ, 8ನೇ
3. ಆಸಿಫ್, ಸ.ಹಿ.ಪ್ರಾ.ಶಾಲೆ ಯಾಳವಾರ, 8ನೇ

ಛದ್ಮವೇಷ :
1. ಶೈಲ, ಸ.ಹಿ.ಪ್ರಾ.ಶಾಲೆ ಗೂಗಿಹಾಳ, 8ನೇ
2. ಪ್ರೀತಂ, ಸ.ಪ್ರೌ.ಶಾಲೆ ಇಜೇರಿ,9ನೇ

ಆಶುಭಾಷಣ :
1. ಆಸಿಫ್, ಸ.ಪ್ರೌ.ಶಾಲೆ ಇಜೇರಿ,9ನೇ


ಭಾಷಣ :
1. ಪ್ರಿಯಾಂಕ, ಸ.ಪ್ರೌ.ಶಾಲೆ ಇಜೇರಿ, 10ನೇ

ಭರತನಾಟ್ಯ :
1. ಲಕ್ಷ್ಮೀ, ಸ.ಪ್ರೌ.ಶಾಲೆ ಇಜೇರಿ, 8ನೇ

ಮಿಮಿಕ್ರಿ:
1. ಪ್ರೀತಂ, ಸ.ಪ್ರೌ.ಶಾಲೆ ಇಜೇರಿ, 9ನೇ

ಚರ್ಚಾಸ್ಪರ್ಧೆ :
1. ಮೀನಾಕ್ಷಿ, ಸಪ್ರೌ.ಶಾಲೆ ಇಜೇರಿ, 10ನೇ
2. ಚಂದಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ, 8ನೇ

ರಂಗೋಲಿ :
1. ರೂಪಾ, ಸ.ಪ್ರೌ.ಶಾಲೆ ಇಜೇರಿ, 10ನೇ
2. ಯಲ್ಲಮ್ಮ, ಸ.ಹಿ.ಪ್ರಾ.ಶಾಲೆ ಯಾಳವಾರ, 8ನೇ
3. ದೇವಕೆಮ್ಮ , ಸ.ಹಿ.ಪ್ರಾ.ಶಾಲೆ ಗೂಗಿಹಾಳ, 8ನೇ


ಸಾಮೂಹಿಕ ವಿಭಾಗ : 8 ರಿಂದ 10

ನೃತ್ಯ :
1. ಹಣಮಂತ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಗೂಗಿಹಾಳ
2. ರೂಪಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ

ಸಂಗೀತ :
1. ರೂಪಾ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಯಾಳವಾರ

ನಾಟಕ :
1. ಶಿವಾನಂದ ಮತ್ತು ಸಂಗಡಿಗರು, ಬಿ.ಎಂ.ಗೌಡ ಹಿ.ಪ್ರಾ.ಶಾಲೆ ಇಜೇರಿ
2. ಪ್ರೀತಂ ಮತ್ತು ಸಂಗಡಿಗರು, ಸ.ಹಿ.ಪ್ರಾ.ಶಾಲೆ ಇಜೇರಿ

ದೃಶ್ಯಕಲೆ :
1.ಮರೆಪ್ಪ ಮತ್ತು ಸಂಗಡಿಗರು, ಸಪ್ರೌ.ಶಾಲೆ ಇಜೇರಿ









Tuesday, 1 August 2017

ಕ್ಷೇತ್ರ ಶಿಕ್ಷಣಾಧಿಕಾರಿಗಳ ಭಾವನಾತ್ಮಕ ಬಿಳ್ಕೊಡುಗೆ


"ಕೂಡುವುದು ಸಹಜ
ಅಗಲಿಕೆ ಅನಿವಾರ್ಯ"
 ದಿ.೩೧/೦೭/೨೦೧೭ ರಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೇವರ್ಗಿಯಲ್ಲಿ ನಮ್ಮ ನೆಚ್ಚಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಜಿ.ಮಜ್ಹರ್ ಹುಸೇನ್ ಅವರ ಬಿಳ್ಕೊಡುವ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಡಾ. ನಿಂಗರಾಜ ಮೂಲಿಮನಿ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು,ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು. ಆಲೂರು ಸಿ.ಆರ್.ಪಿ ಯಾದ ಶ್ರೀ ದಾವಲ್ ಸಾಬ ನಿರೂಪಿಸಿದರು. ಸಿ.ಆರ್.ಪಿ ಗಳಾದ ಶ್ರೀ ಮಲ್ಲನಗೌಡ, ಶ್ರೀ ಪ್ರಮೋದ್, ಶ್ರೀ ಸಚಿನ್ ಕುಮಾರ,ಶ್ರೀ ಓಬಳೇಶ್ ಹಾಗೂ ಬಿ.ಆರ್.ಪಿ ಯಾದ ಶ್ರೀ ಮನೋಹರ ಅನಿಸಿಕೆ ವ್ಯಕ್ತಪಡಿಸಿದರು. ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶರಣಪ್ಪ ಹೊಸಮನಿ, ಐಇಆರ್ಟಿ ಶ್ರೀ ಗುರುಶಾಂತಪ್ಪ ಚಿಂಚೋಳಿ ಹಾಗೂ ಪ್ರೌಢ ಶಾಲಾ ಮುಖ್ಯಗುರುಗಳಾದ ಹಣಮಂತ ಕುಳಗೇರಿ ಅವರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಗ್ಗೆ ಅವರ ಕಾರ್ಯ ವೈಖರಿಯ ಬಗ್ಗೆ ಮೆಚ್ಚಿನ ಮ ಅದರ ಮಾತುಗಳನ್ನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಪೇಕ್ಷೆಯ ಮೇರೆಗೆ ನರಿಬೋಳ ತಾಂಡಾ ಮುಖ್ಯ ಗುರು ಗಳಾದ ಶ್ರೀ ಗುರು ಲಿಂಗಪ್ಪ  ಬುಕ್ಕಾ ಅವರು ವಚನ ಸುಧೆ ಹಾಡಿ ರಂಜಿಸಿದರು. 

ಬಳಿಕ ಬಿ ಆರ್ ಸಿ ಕಾರ್ಯಾಲಯದ ವತಿಯಿಂದ,ಕ.ರಾ.ಸ.ನೌ.ಸಂಘ ,ಕ.ರಾ.ಪ್ರಾ.ಶಾ.ಶಿ.ಸಂಘ ಹಾಗೂ ಕ.ರಾ.ಪ್ರೌ.ಶಾ.ಶಿ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ತರುವಾಯ ತಮ್ಮ ಸೇವೆಯ ಬಗ್ಗೆ ಹಾಗೂ ಶಿಕ್ಷಕರೊಂದಿಗಿನ ಒಡನಾಟದ ಬಗ್ಗೆ ಕ್ಷೇತ್ರ ಶಿಕ್ಷಣಾದಿಕಾರಿಗಳು ಅಭಿಪ್ರಾಯ ಹಂಚಿಕೊಂಡರು. ವೃತ್ತಿಪರತೆಯನ್ನು ಮೆಚ್ಚಿ ಸ್ವಾಭಿಮಾನದಿಂದ ಸೇವೆ ಸಲ್ಲಿಸಲು ಸೂಚಿಸಿದರು. ಅವರ ಮಾತುಗಳಿಂದ ಅಲ್ಲಿ ನೆರೆದವರೆಲ್ಲ ಭಾವುಕರಾದರು. 

 ಒಂದು ವಿಷಣ್ಣ ಮನಸ್ಥಿತಿಯಿಂದ ಮೆಚ್ಚಿನ ಅಧಿಕಾರಿಯನ್ನು ಬಿಳ್ಕೊಡಲಾಯಿತು.

Wednesday, 12 July 2017

ಸರ್ಕಾರಿ ಶಾಲೆಗಳ ಸಬಲೀಕರಣ


ಆತ್ಮ ಸಂತೃಪ್ತಿಗಾಗಿ ದುಡಿಯೋಣ : ರಾ.ಯೋ.ಸ.ನಿ ಮಂಜುಳಾ ಕಿವಿಮಾತು

ರಾಜ್ಯ ಯೋಜನಾ  ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಅವರ ಜತೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳು
ಇಂದು ದಿ. 12/07/2017 ರಂದು  ರಾಜ್ಯ ಯೋಜನಾ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಅವರು ಹೈದರಾಬಾದ್ - ಕರ್ನಾಟಕ ಭಾಗದಲ್ಲಿನ ಶಾಲೆಗಳಲ್ಲಿ  'ಗಣಿತ ಕಲಿಕಾ ಅಂದೋಲನ' ಕಿಟ್ ಅನುಷ್ಠಾನ ಕುರಿತು  ಪರಿಶೀಲನೆ ನಡೆಸಿದರು. ಕೆಲ ಶಾಲೆಗಳಲ್ಲಿ ಸ್ವತಃ ತಾವೇ ಗಣಿತ ಕಲಿಕಾ ಅಂದೋಲನ ಕಿಟ್ ನ್ನು  ಬಳಸಿ ಹೇಗೆ ಕಲಿಕೆಯನ್ನು ಅನುಕೂಲಿಸಬೇಂಕೆಂದು  ಪ್ರದರ್ಶನ ನೀಡಿದರು. 
           ಬಳಿಕ ಜೇವರ್ಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳೊಂದಿಗೆ  ಸಂವಾದ ನಡೆಸಿದರು. ವಿವಿಧ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಷಯಗಳ ಮೇಲೆ ಚರ್ಚಿಸಿದರು. ಸಿಆರ್ಪಿಗಳು ನಿರಂತರವಾಗಿ ಶಾಲೆಗಳನ್ನು ಸಂದರ್ಶಿಸಿ ಶಿಕ್ಷಕರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು. ಅಲ್ಲದೇ ಕ್ಲಸ್ಟರ್ ಕ್ರಿಯಾಯೋಜನೆ ತಯಾರಿಸಿ ಕ್ಷಣಾರ್ಧದಲ್ಲಿ ಮಾಹಿತಿ ಲಭ್ಯವಾಗುವಂತೆ ಯೋಜನೆ ಸಿದ್ಧಪಡಿಸಿಕೊಳ್ಳಬೇಕೆಂದು ತಿಳಿಸಿದರು.

       ಹಗಲು ರಾತ್ರಿ ಸಿಆರ್ಪಿಗಳು SATS ಮಾಹಿತಿ ಅಪ್ ಡೇಟ್ ಮಾಡಿದುದ್ದಕ್ಕೆ ಅಭಿನಂದಿಸಿದ ಅವರು ಆತ್ಮ ಸಂತೃಪ್ತಿಗಾಗಿ ದುಡಿದಾಗ ಎಂತಹ ಸಮಸ್ಯೆಗಳೇ ಆಗಲಿ ತಂತಾನೇ ನಿವಾರಣೆಯಾಗುತ್ತವೆ ಎಂದು ಕಿವಿಮಾತು ಹೇಳಿದರು. ತಮ್ಮ ವೃತ್ತಿ ಜೀವನದ ಕೆಲವು ನಿದರ್ಶನಗಳನ್ನು ನೀಡಿದರು. 

           ಕ್ಷೇತ್ರ ಸಮನ್ವಯಾಧಿಕಾರಿಯಾದ ಡಾ. ನಿಂಗರಾಜ ಮೂಲಿಮನಿ ಅವರು ಸಭೆಯ ಕೊನೆಯಲ್ಲಿ ವಂದಿಸಿ ಸಹಾಯಕ ನಿರ್ದೇಶಕರನ್ನು ಬೀಳ್ಕೊಟ್ಟರು.

Sunday, 9 July 2017

ವಿಕಲಚೇತನರಿಗಾಗಿ ಜಿಪಂ ವೇತನ : ವಾಗ್ದಾನ



ಊಟದ ತಟ್ಟೆ ಹಾಗೂ ಲೋಟಗಳ ದಾನ

ಇಂದು ದಿ.07/07/2017 ರಂದು ಇಜೇರಿಯ  ಸ.ಕಿ.ಪ್ರಾ.ಶಾಲೆ ಭೀಮನಗರ ಶಾಲೆಗೆ ಗ್ರಾಮದ ಶ್ರೀ ಮಲ್ಲಯ್ಯ ಗುತ್ತೇದಾರ್ ಅವರು 100 ಊಟದ ತಟ್ಟೆ ಹಾಗೂ 10 ಲೋಟಗಳನ್ನು ದಾನವಾಗಿ ಮುಖ್ಯೋಪಾಧ್ಯಾಯರಾದ ಅಪ್ಪು ಲಮಾಣಿ ಹಾಗೂ ಸಹಶಿಕ್ಷಕರ ಸಮ್ಮುಖದಲ್ಲಿ  ನೀಡಿದರು. ಕಳೆದ ಮಾರ್ಚ್ ನಲ್ಲಿ ಶಾಲಾ ನಾಯಕತ್ವ ಅಭಿವೃದ್ಧಿ ಕಾರ್ಯಕ್ರಮದಡಿ ವಾಗ್ದಾನ ನೀಡಿದ್ದರು.



Friday, 7 July 2017

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆಯವರೊಂದಿಗೆ ಸಂವಾದ - ಕಲಬುರಗಿ






ದಿ.05/07/2017 ರಂದು ಕಲಬುರಗಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಶಿಕ್ಷಣಾಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ರಾಜ್ಯಾಧ್ಯಕ್ಷೆಯಾದ ಶ್ರೀಮತಿ ಕೃಪಾ ಆಳ್ವಾ,ಜಿಲ್ಲಾಧಿಕಾರಿಯಾದ ಉಜ್ವಲಕುಮಾರ್ ಘೋಷ್,ಜಿಲ್ಲಾ ಪಂಚಾಯಿತಿ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ,ಎಸ್ ಪಿ ಶಶಿಕುಮಾರ ಮುಂತಾದವರು ಹಾಜರಿದ್ದರು.

    ಸಭೆಯನ್ನುದ್ಧೇಶಿಸಿ ಮಾತನಾಡಿದ ಶ್ರೀಮತಿ ಕೃಪಾ ಆಳ್ವ ಅವರು ಸರ್ಕಾರಿ ಶಾಲೆಗಳ ಉಳಿವು ಹಾಗೂ ಅಲ್ಲಿನ ಮಕ್ಕಳ ಹಕ್ಕುಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯಲ್ಲಿ ಕಡ್ಡಾಯವಾಗಿ ಮೂಲಭೂತ ಸೌಕರ್ಯಗಳಾದ  ಶೌಚಾಲಯ,ಕಪ್ಪುಹಲಗೆ,ಕುಡಿಯುವ ನೀರು, ಶಾಲಾ ಕೊಠಡಿಗಳು,ಡೆಸ್ಕ್ ಗಳು ಮುಂತಾದವುಗಳನ್ನು ಒದಿಗಿಸಿಕೊಳ್ಳುವತ್ತ ಇಲಾಖೆ ಕಾರ್ಯಪ್ರವೃತ್ತವಾಗಬೇಕೆಂದು ತಿಳಿಸಿದರು.
 ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಪ್ರಗತಿಯನ್ನು ಹಂಚಿಕೊಂಡರು.
 ಮುಂದುವರೆದು ಶ್ರೀಮತಿ ಕೃಪಾ ಅವರು, ಇಲಾಖೆ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ,ಡಿಜಿಟಲ್ ಶಿಕ್ಷಣ ಹಾಗೂ ಉತ್ತಮ ಸುರಕ್ಷಿತ ವಾತಾವರಣ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಜುಲೈ 31,2017ರೊಳಗಾಗಿ ಪ್ರತಿ ಶಾಲೆಯಲ್ಲಿ ಕನಿಷ್ಠ 150 ಸದಸ್ಯರಿರುವಂತೆ 'ಹಳೆಯ ವಿದ್ಯಾರ್ಥಿಗಳ ಸಂಘ' ರಚಿಸಿ,ಶಾಲೆಗೆ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸಬೇಕೆಂದು ಸೂಚಿಸಿದರು.
ಪೊಲೀಸ್ ಇಲಾಖೆಯವರು ವಾರಕ್ಕೊಮ್ಮ
 ಸಮೀಪದ ಶಾಲೆಗೆ ತೆರಳಿ ಪಾಠಬೋಧನೆ ಮಾಡಿ ಎಂದ ಅವರ ಸಲಹೆಗೆ ಉತ್ತರಿಸಿದ ಎಸ್ ಪಿ ಶಶಿಕುಮಾರ,"ನಾವುಪಾಠ ಮಾಡುತ್ತೇವೆ,ಅದರಂತೆ ಶಿಕ್ಷಕರು ಕೆಲವು ಬಾರಿ ಬಂದೋಬಸ್ತ್ ಕೆಲಸ ಮಾಡಲಿ" ಎಂದು ನಗೆ ಚಟಾಕಿ ಹಾರಿಸಿದರು.

 ಮಕ್ಕಳ ಹಕ್ಕುಗಳ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಅದಕ್ಕಾಗಿ ನಾವೆಲ್ಲ ಮನಸ್ಸು ಮಾಡಬೇಕು ಎನ್ನುತ್ತ ಸಭೆಗೆ ಮಂಗಲ ಹಾಡಲಾಯಿತು.



Monday, 3 July 2017

ಶಿಕ್ಷಕರ ವೃತ್ತಿಪರ ಅಭಿವೃದ್ಧಿ ತರಬೇತಿಯ ಎಂ.ಆರ್.ಪಿ ಆಯ್ಕೆಗಾಗಿ ಮುಖ್ಯೋಪಾಧ್ಯಾಯರ ಸಭೆ ಜೇವರಗಿ

ದಿ.01/07/2017 ರಂದು ಬ್ಲಾಕ್ ಹಂತದಲ್ಲಿ ಒಂದು ದಿನದ ಶಿಕ್ಷಕರ ವೃತ್ತಿಪರ ಅಭಿವೃದ್ಧಿ(TEACHERS PROFESSIONAL DEVELOPMENT) ತರಬೇತಿಯ ಎಂ.ಆರ್.ಪಿ ಆಯ್ಕೆಗಾಗಿ ಮುಖ್ಯೋಪಾಧ್ಯಾಯರ ಸಭೆ ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಜೇವರ್ಗಿಯ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಡಾ. ನಿಂಗರಾಜ ಮೂಲಿಮನಿ ವಹಿಸಿಕೊಂಡಿದ್ದರು.ನೊಡಲ್ ಅಧಿಕಾರಿಯಾಗಿ DIETನ ಶ್ರೀ ಗೋಪಾಲಕೃಷ್ಣ,  ಶಿಕ್ಷಣ ಸಂಯೋಜಕರಾದ ಶ್ರೀ ಮೋನಪ್ಪ ಬಡಿಗೇರ, ಶ್ರೀ ಕೇಶವಸಿಂಗ್ ರಾಠೋಡ್,ಶ್ರೀಮತಿ ಶರಣಮ್ಮ ಇನಾಂದಾರ್, ಕ್ಷೇತ್ರ ಸಂಪನ್ಮೂಲ
ವ್ಯಕ್ತಿಯಾದ ಶ್ರೀ ಮನೋಹರ ಹಾಗೂ ಐ.ಇ.ಆರ್.ಟಿಯ ಶ್ರೀಮತಿ ಮಹಾನಂದ ಅವರು ಅತಿಥಿ ಸ್ಥಾನ ವಹಿಸಿಕೊಂಡಿದ್ದರು. ಟಿಪಿಡಿಯ ಬಗ್ಗೆ  ವಿಸ್ತಾರವಾಗಿ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಲಾಯಿತು. ಅಂದೋಲಾ,ಅಂಕಲಗಾ,ಬಿಳವಾರ,ಜೇವರಗಿ(ಉ),ಜೇವರಗಿ(ದ),ಗಂವ್ಹಾರ,ಹಿಪ್ಪರಗಾ,ಇಜೇರಿ, ಕೋಳಕೂರ,ಮಂದೇವಾಲ ಹಾಗೂ ನರಿಬೋಳ ಕ್ಲಸ್ಟರ್ ನ ಸಿ.ಆರ್.ಪಿ ಗಳು ಹಾಗೂ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

Saturday, 10 June 2017

ಎಸ್.ಎ.ಟಿ.ಎಸ್(SATS) ನಿರ್ವಹಿಸುವ ಕುರಿತು


ಎಲ್ಲ ಮುಖ್ಯೋಪಾಧ್ಯಾಯರಿಗೆ ಕಳೆದ ವರ್ಷವೇ ನಿಮ್ಮ ಶಾಲೆಯ ಎಸ್.ಎ.ಟಿ.ಎಸ್(ಎಸ್.ಟಿ.ಎಸ್) ಲಾಗಿನ್ ಡಿಟೇಲ್ಸ್ ಗಳನ್ನು ಕಳಿಸಲಾಗಿದೆ. ಅದರಂತೆ ಈ2017-18ನೆಯ ಸಾಲಿನಲ್ಲಿ *ವಿದ್ಯಾರ್ಥಿಯ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ(ಎಸ್.ಎಟಿ.ಎಸ್)* ಯಲ್ಲಿ ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದೆ
*೧.ಮುಂದಿನ ತರಗತಿಗೆ ಪ್ರಮೋಷನ್*
*೨. ಟಿಸಿ ನೀಡುವುದು*
*೩.ಪ್ರವೇಶಾತಿ ಮಾಡಿಕೊಳ್ಳುವುದು*
*೪. ಆಯಾ ತಿಂಗಳಿನ ನಂತರ ಹಾಜರಾತಿ ಅಪ್ ಡೇಟ್ ಮಾಡುವುದು*
*೪. ನಿಗದಿತ ಅವಧಿಯಲ್ಲಿ ಸಿಸಿಇ ಎಂಟ್ರಿ ಮಾಡುವುದು*
*೫. ಸಮಯಾನುಸಾರ ವಿದ್ಯಾರ್ಥಿಗಳ ವಿವರವನ್ನು ಅಪ್ ಡೇಟ್ ಮಾಡುವುದು*

ಸಿ.ಆರ್.ಪಿ ಲಾಗಿನ್ ನಲ್ಲಿ ಇವ್ಯಾವೂ ಅಪ್ಡೇಟ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು ಈ ಬಗ್ಗೆ ಕಾಳಜಿ ವಹಿಸಿ ನಿಮ್ಮ ಶಾಲೆಯ ಮಾಹಿತಿ ಅಪ್ಡೇಟ್ ಮಾಡಿಕೊಳ್ಳಿ.

Thursday, 25 May 2017

ಶಾಲಾ ಪ್ರಾರಂಭೋತ್ಸವ..2017-18



ಬನ್ನಿರಿ ಬನ್ನಿರಿ
ಚೆಲುವಿನ ಚಿಣ್ಣರೇ
ನಿಮ್ಮಯ ಶಾಲೆಯ 
ಕಡೆಗೀಗ
ಬೇಸಿಗೆ ರಜೆಯ
ಬೇಸರ ಕಳೆದು
ಶಾಲೆಯ ಕಡೆಗೆ ನಡೆ ಈಗ..||

ಹೊಸ ಸಮವಸ್ತ್ರ ಪಠ್ಯಪುಸ್ತಕ
ನಿಮಗಾಗಿ ಕಾದಿಹವು
ನಿಮ್ಮಯ ಪಾದಕೆ ಮೆತ್ತನೆ ಶ್ಯೂ ಸಾಕ್ಸ್ ಕೆಲವೇ ದಿನದಿ ಬರಲಿಹವು...|೧|

ಎಂದಿನ ಹಾಗೆ ಪಾಠಕೆ ಮೊದಲು
ಕೆನೆಕೆನೆ ಹಾಲು ನಿಮಗಾಗಿ
ಪಾಠದ ಬಳಿಕ ಹಸಿದ ಹೊಟ್ಟೆಗೆ
ಬಿಸಿಬಿಸಿ ಊಟ ರುಚಿಯಾಗಿ...|೨|

ಪಾಠದ ಜತೆಗೆ ಆಟದ ಮಜವು
ನಿಮ್ಮಯ ಜತೆಗೆ ನಾವಿಲ್ಲಿ
ಸ್ಪಷ್ಟ ಓದು ಶುದ್ಧ ಬರಹ
ಸರಳ ಗಣಿತವೇ ಇನ್ನಿಲ್ಲಿ...|೩|


ರೇಡಿಯೋ ಆಲಿಸಿ
ಟಿವಿಯ ವೀಕ್ಷಿಸಿ
ಕಂಪ್ಯೂಟರ್ ನ ಕಲಿಯೋಣ
ನಕಾಶೆ ಬಿಡಿಸಿ
ಪೋಷಾಕು ತೊಡಿಸಿ
ಪ್ರತಿಭಾ ಕಾರಂಜಿಯಾಗೋಣ..|೪|

ಎಲ್ಲವ ಕಲಿತು ಎಲ್ಲರ ಬೆರೆತು
ಸಾಕ್ಷರ ಭಾರತ ಕಟ್ಟೋಣ
ವಿವಿಧತೆಯಲ್ಲಿ ಐಕ್ಯತೆ ಮೆರೆದು
ಹಿರಿಮೆಯ ಗುರಿಯ ಮುಟ್ಟೋಣ..|೫|

--- ಸಚಿನ್ ಕುಮಾರ ಬ. ಹಿರೇಮಠ
ಸಮೂಹ ಸಂಪನ್ಮೂಲ ಕೇಂದ್ರ ಇಜೇರಿ
ತಾ. ಜೇವರ್ಗಿ, ಜಿ. ಕಲಬುರಗಿ