ಅದು 2008 ನೆಯ ಇಸವಿ. ನನ್ನ ಶಿಕ್ಷಕ ವೃತ್ತಿಯ ಎರಡನೆಯ ವರ್ಷ. ಆರನೆಯ ತರಗತಿಯಲ್ಲೊಬ್ಬ ಅಸಾಧಾರಣ ವಿದ್ಯಾರ್ಥಿ..ತುಂಬಾ ವಿಧೇಯ. ಬುದ್ಧಿವಂತ ಕೂಡ. ಮಲ್ಲೇಶಿ ಅಂತ ಅವನ ಹೆಸರು. ತರಗತಿಯ ಪಾಠಗಳನ್ನು ಏಕಾಗ್ರತೆಯಿಂದ ಕೇಳುತ್ತಿದ್ದ. ಓದು,ಬರೆಹ ಕೂಡ ಅಷ್ಟೇ ವ್ಯವಸ್ಥಿತ. ಆದರೆ ಅವನ ಮುಖದಲ್ಲಿ ನಗುವಿಗೆ ಒಂದಷ್ಟೂ ಜಾಗವಿರಲಿಲ್ಲ.. ಅವನ ನಗುವಿಗಾಗಿ ತಿಂಗಳುಗಟ್ಟಲೇ ಕಾಯಬೇಕಿತ್ತು. ಪಾಠಬೋಧನೆಯ ಮಧ್ಯೆ ಜೋಕ್ ಹೇಳಿದರೂ ಅವನ ತುಟಿಗಳು ಮಂದಹಾಸ ಮಾತ್ರ ಬೀರುತ್ತಿದ್ದವು. "ಯಾಕೋ ನಗಾಂಗೇ ಇಲ್ಲಲೋ?" ಅಂತ ಕೇಳಿದಾಗಲೂ ಅದೇ ಮಂದಹಾಸ ಅವನ ಉತ್ತರವಿರುತ್ತಿತ್ತು.
ಶಾಲೆಯಿಂದ ಸುಮಾರು ಒಂದು ಕಿಲೋಮೀಟರ್ ಅಂತರದಲ್ಲಿ ಅವನ ಮನೆ. ವಾರಿ(ಎತ್ತರದ ಜಾಗ) ಮ್ಯಾಗಿನ ಮನೆಗಳಿಂದ ಬರುತ್ತಿದ್ದ ಬಹಳಷ್ಟು ಜನ ವಿದ್ಯಾರ್ಥಿಗಳಲ್ಲಿ ಇವನೂ ಒಬ್ಬ. ಅವನ ನೋಟ್ ಪುಸ್ತಕಗಳನ್ನೊಮ್ಮೆ ನೋಡಬೇಕು. ಹಳೆಯ ನೋಟ್ ಪುಸ್ತಕದಲ್ಲಿ ಉಳಿದ ಕೆಲವು ಖಾಲಿ ಪುಟಗಳನ್ನು ಜೋಡಿಸಿ ದಾರದಿಂದ ಹೊಲಿದು ಮಾಡಿದ(ಬೈಂಡಿಂಗ್) ನೋಟ್ ಪುಸ್ತಕ. ಅವು ನಿಜಕ್ಕೂ ನನ್ನ ಬಾಲ್ಯವನ್ನೇ ನೆನೆಸುವಂತಿದ್ದವು. ಬಟ್ಟೆಗಳಲ್ಲಿ ಅಲ್ಲಲ್ಲಿ ಹರಿದ ರೀತಿ. ಅವನ ಹಾಜರಾತಿ ನಿಯಮಿತವಾಗಿರುತ್ತಿದ್ದಾರೂ ಕೆಲವು ಸಲ ಎರಡು ಮೂರು ದಿನಗಳ ಮಟ್ಟಿಗೆ ಗೈರಾಗುತ್ತಿದ್ದ. ತರಗತಿಯಲ್ಲಿ ಗೈರಾಗಲು ಕಾರಣ ಕೇಳಿದಾಗ ಏನನ್ನೂ ಹೇಳದೇ ಮುಂದಕ್ಕೆ ಕೈ ಚಾಚುತ್ತಿದ್ದ. ಅಲ್ಲಿ ಅವನು ತನ್ನ ನಿಜವಾದ ತಪ್ಪಿಗಾಗಿ ಕೈ ಚಾಚುತ್ತಿದ್ದನೋ ಅಥವಾ ತಾನು ನೀಡದ ಕಾರಣಕ್ಕೆ ಬದಲಿ ಕೈ ಚಾಚುತ್ತಿದ್ದನೋ ಗೊತ್ತಾಗುತ್ತಿರಲಿಲ್ಲ. ಹಾಗೇ ಕೈ ಚಾಚುವಾಗ ಅವನ ಮುಖದಲ್ಲಿ ತನ್ನ ತಪ್ಪಿಲ್ಲ ಎಂಬ ವಿಶ್ವಾಸ ಮೂಡುತ್ತಿತ್ತು. ನಮಗೆ ಅವನನ್ನು ಶಿಕ್ಷಿಸುವ ಮನಸ್ಸಾಗುತ್ತಿರಲಿಲ್ಲ..
ಮಕ್ಕಳ ಗಣತಿಗೆಂದು ಒಂದು ಸಲ ಅವನ ಮನೆಗೆ ಭೇಟಿ ನೀಡುವ ಪ್ರಸಂಗ ಬಂದಿತು. ಡಿಸೆಂಬರ್ ತಿಂಗಳು. ಇವನು ಆ ದಿನ ಶಾಲೆಗೆ ಗೈರಾಗಿದ್ದ. ಗಣತಿ ನಿಮಿತ್ತ ಇವನ ಮನೆಗೆ ಹೋದಾಗ ಇವನ ತಾಯಿಗೆ ಹುಷಾರಿಲ್ಲದ್ದು ತಿಳಿಯಿತು. ಸಾಧಾರಣ ಪರಸಿ ಮನೆ. ಎರಡೇ ಕೋಣೆಗಳು. ಮಲ್ಲೇಶಿಯ ಗೈರಿನ ಬಗ್ಗೆ ವಿಚಾರಿಸಿದಾಗ ಆ ತಾಯಿ ಹೀಗೆ ವಿವರಿಸಿದಳು.
"ಮಲ್ಲೇಶಿಯ ಅಪ್ಪ ಮಲ್ಲೇಶಿಯ ತಂಗಿ ಹುಟ್ಟಿದ ವರ್ಸದಾಗ ಜಡ್ಡ ಬಂದ ತೀರಕೊಂಡರಿ. ವ್ಯವಸಾಯಕ್ಕ ತುಸು ಹೊಲಾ ಐತ್ರಿ ಖರೇ ಅದನ್ನ ಉತ್ತಿ ಬಿತ್ತಲಾಕ ಆಗದ ಸಂಬಂಧಿಕರೊಬ್ಬರಿಗೆ ಪಾಲಿಗೆ ಕೊಟ್ಟೇವ್ರಿ. ಅವ್ರಂತೂ ಈಗೀಗ ಬೆಳೀ ಇಲ್ಲ ಅಂತ ಏನೂ ಕೊಟ್ಟೇ ಇಲ್ರಿ..ದೊಡ್ಡ ಮಗ ಕೂಲಿ ಕೆಲಸ ಮಾಡುತ್ತಾನ್ ಖರೇ ಜವಾಬ್ದಾರಿ ಇಲ್ಲರಿ.ಮನಿಗೆ ಕೊಡೂದ್ಕಿಂತ ಇಸ್ಕೊಳ್ಳೋದ ಜಾಸ್ತಿ. ಇನ್ನೂ ಮಲ್ಲೇಶಿ ಹಾಗೂ ಅವನ ತಂಗಿ ಸಾಲಿಗ್ ಹೊಕ್ಕಾರ್ರಿ. ಅವರ ಸಲುವಾಗೇ ನಾ ಕೂಲಿಗೆ ಹೋಗೂದು ಅನಿವಾರ್ಯರಿ. ನನಗೂ ಈಗೀಗ ಆರಾಮ ತಪ್ಪಾತೇತ್ರಿ.. ನಾ ಹಾಸಿಗೆ ಹಿಡಿದಾಗ ನನ್ನ ಮಲ್ಲೇಶಿ ಎರಡು ಮೂರು ದಿನ ಕೂಲಿಗೆ ಹೊಕ್ಕಾಣ್ರಿ. ನಾ ಬ್ಯಾಡ ಅಂದರೂ ಕೇಳಲ್ಲರಿ..ಅದಕ್ಕೆ ಅಂವ ಚೆನ್ನಾಗಿ ಓದಿ ನಿಮ್ಮಂಗ ಆಪೀಸರ್ ಆಗ್ಬೇಕ್ರಿ" ಅಂತ ದುಃಖಿಸತೊಡಗಿದಳು ಆ ತಾಯಿ.
12 ವರ್ಷದ ಹುಡುಗನಿಗೆ ಸಂಸಾರದ ಬಗ್ಗೆ ಅದೆಷ್ಟು ಜವಾಬ್ದಾರಿ. ಅಷ್ಟು ಬಡತನದ ನಡುವೆ ಅವನ ಮುಖದಲ್ಲಿ ನಗು ಅದ್ಹೇಗೆ ಸಿಕ್ಕೀತು? ಅವನು ಚಾಚುತ್ತಿದ್ದ ಕೈ ಅವನ ಅಸಲಿಯತ್ತನ್ನು ವಿವರಿಸದೇ 'ಹೊಡೆದು ಬಿಡಿ, ದೊಡ್ಡ ನೋವಿನ ಮುಂದೆ ಈ ಛಡಿಯೇಟು ಏನು ಮಹಾ' ಎಂದೆನ್ನುವಂತಿತ್ತು. ನನ್ನ ಕಣ್ಣಾಲಿಗಳಂತೂ ತುಂಬಿ ಬಂದವು. ಅವನ ಸೂಕ್ಷ್ಮ ಬುದ್ಧಿ ಶಿಕ್ಷಕರಾದ ನಮ್ಮ ಮುಂದೆ ಮಹಾನ್ ಎನ್ನಿಸಿತು.
ಒಂದಿನ ಅವನನ್ನ ಎದುರಿಗೆ ಕೂಡಿಸಿ ಹೇಳಿದ್ದೆ,
"ನಿನಗೆ ಏನಾದ್ರೂ ಬೇಕಾದ್ರ ಕೇಳು ಮಲ್ಲೇಶಿ" ಅಂತ. ಆದರೆ ಆತ ನನಗಿಂತ ನಮ್ಮ ಇನ್ನೊಬ್ಬ ಶಿಕ್ಷಕರಾದ ಗೋಣೆಪ್ಪ ಅವರ ಜೊತೆ ಮುಕ್ತವಾಗಿ ಮಾತನಾಡುತ್ತಿದ್ದ. ಅವರ ಅಪ್ಪಟ ಶಿಷ್ಯ ಕೂಡ. ತರಗತಿಯ ಒಳಗಿನಿಂದ ನಮ್ಮ ವಿದ್ಯಾರ್ಥಿಗಳನ್ನು ಅರಿತುಕೊಳ್ಳವುದಕ್ಕಿಂತ ತರಗತಿ ಹೊರಗಿನಿಂದ ಅರಿತುಕೊಂಡರೆ ಅದಕ್ಕೆ ಹೆಚ್ಚು ಮಹತ್ವ.
ಈಗ ಮಲ್ಲೇಶಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿ.ಎ ಮುಗಿಸಿ ಸ್ನಾತಕೋತ್ತರ ಪದವಿ ಓದುತ್ತಿದ್ದಾನೆ. ಮನೆಯ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದೆ.ಫೇಸ್ ಬುಕ್ ನಲ್ಲಿ ಆಗಾಗ ಮಾತಾಗುತ್ತಾನೆ. ಅವನ ಮುಖದಲ್ಲಿ ಮಾತ್ರ ಗೆದ್ದೇ ಗೆಲ್ಲುತ್ತೇನೆಂಬ ಮಂದಹಾಸ ಇನ್ನೂ ಇದೆ. ಮಿಸ್ ಯೂ ಮಲ್ಲೇಶಿ.

No comments:
Post a Comment